
ಪ್ರಗತಿವಾಹಿನಿ ಸುದ್ದಿ, ನವದೆಹಲಿ – ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ವಿವರವಾಗಿ ಸಚಿವ ಸಂಪುಟದ ಕುರಿತು ಚರ್ಚಿಸಲಾಗಿದೆ. 2 -3 ಬೇರೆ ಬೇರೆ ಪಟ್ಟಿ ನೀಡಲಾಗಿದೆ. ನಾಳೆ ರಾತ್ರಿಯ ಹೊತ್ತಿಗೆ ಅವರೇ ಪಟ್ಟಿಯನ್ನು ಪ್ರಕಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಡ್ಡಾ ಅವರನ್ನು ಭೇಟಿ ಮಾಡಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡುತ್ತಿದ್ದರು. ಎಲ್ಲ ವಿಷಯಗಳನ್ನೂ ಚರ್ಚಿಸಲಾಗಿದೆ. ಉಪಮುಖ್ಯಮಂತ್ರಿಗಳು ಇರುತ್ತಾರಾ, ಎಷ್ಟು ಜನ ಇರುತ್ತಾರೆ, ವಿಜಯೇಂದ್ರ ಕ್ಯಾಬಿನೆಟ್ ನಲ್ಲಿ ಇರುತ್ತಾರೆ ಎಲ್ಲವನ್ನು ಹೈಕಮಾಂಡ್ ನಿರ್ಧರಿಸುತ್ತದೆ. ನಾಳೆ ಲೋಕಸಭೆ ಅಧಿವೇಶನವಿರುವುದರಿಂದ ರಾತ್ರಿಯ ಹೊತ್ತಿಗೆ ಅಂತಿಮ ಪಟ್ಟಿಯನ್ನು ನಡ್ಡಾ ಅವರು ಪ್ರಕಟಿಸಲಿದ್ದಾರೆ ಎಂದು ಬೊಮ್ಮಾಯಿ ವಿವರಿಸಿದರು.
ವಿದೇಶ ಪ್ರಜೆಗಳ ದಾಂದಲೆ ಕುರಿತು ಪ್ರಸ್ತಾಪಿಸಿ ನಮ್ಮ ಪೊಲೀಸರು ಸೂಕ್ತ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ