Latest

ಪ್ರವಾಹದಲ್ಲಿ ಸಿಲುಕಿದೆ ಮಹಾಲಕ್ಷ್ಮಿ ಎಕ್ಸಪ್ರೆಸ್

ಪ್ರವಾಹದಲ್ಲಿ ಸಿಲುಕಿದೆ ಮಹಾಲಕ್ಷ್ಮಿ ಎಕ್ಸಪ್ರೆಸ್

 

ಪ್ರಗತಿವಾಹಿನಿ ಸುದ್ದಿ, ಮುಂಬೈ –

ಮುಂಬೈನಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಪ್ಯಾಸೆಂಜರ್ ರೈಲೊಂದು ಪ್ರವಾಹದಲ್ಲಿ ಸಿಲುಕಿದೆ.

ಕಳೆದ 2 ದಿನದಿಂದ ಮುಂಬೈನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಲಕ್ಷಾಂತರ ಜನ ತೊಂದರೆಗೆ ಸಿಲುಕಿದ್ದಾರೆ.

ಈ ಮಧ್ಯೆ, ಇಂದು ಬೆಳಗ್ಗೆ ಬದ್ಲಾಪುರ -ವಂಗಾನಿ ಮಧ್ಯೆ ಸಂಚರಿಸುತ್ತಿದ್ದ ಮಹಾಲಕ್ಷ್ಮಿ ಎಕ್ಸಪ್ರೆಸ್ ರೈಲು ಪ್ರವಾಹದ ಮಧ್ಯೆ ಸಿಲುಕಿಕೊಂಡಿದೆ. ಮುಂಬೈ ನಗರದಿಂದ ಸುಮಾರು 110 ಕಿಮೀ ದೂರದಲ್ಲಿ ರೈಲು ನಿಂತಿದೆ. ರೈಲು ಮುಂದೆ ಚಲಿಸಲಾಗದೆ ನಿಂತುಕೊಂಡಿದೆ.

ಸುಮಾರು 2 ಸಾವಿರಕ್ಕೂ ಹೆಚ್ಚು ಜನರು ರೈಲಿನಲ್ಲಿದ್ದು, ಹೊರಗೆ ಬರಲಾಗದೆ ಒದ್ದಾಡುತ್ತಿದ್ದಾರೆ.

ರೈಲಿನಲ್ಲಿ ಸಿಲುಕಿಕೊಂಡಿರುವವರ ರಕ್ಷಣಾ ಕಾರ್ಯ ಆರಂಭವಾಗಿದೆ. ರಕ್ಷಣೆಗೆ ಹೆಲಿಕಾಪ್ಟರ್ ಬಳಸಲಾಗುತ್ತಿದೆ. ಆದರೆ ಕಾರ್ಯಾಚರಣೆ ನಿಧಾನವಾಗುತ್ತಿದೆ. ಹಾಗಾಗಿ ಅವರಿಗೆ ಆಹಾರ ಪೂರೈಕೆ ವ್ಯವಸ್ಥೆಗೂ ಸಿದ್ದತೆ ನಡೆಯುತ್ತಿದೆ.

ರೈಲಿನಲ್ಲಿದ್ದವರು ಕೆಳಗೆ ಇಳಿಯದಂತೆ ಈಗಾಗಲೆ ಸೂಚನೆ ನೀಡಲಾಗಿದೆ. ರಕ್ಷಣೆಗೆ ಹಲವು ತಂಡಗಳು ಕಾರ್ಯಪ್ರವೃತ್ತವಾಗಿವೆ. ರೈಲಿನಲ್ಲಿದ್ದವರ ಸಂಬಂಧಿಕರ ಆತಂಕ ಹೆಚ್ಚಿದೆ. ಸಂಬಂಧಿಕರು ಸ್ಥಳಕ್ಕೆ ದೌಡಾಯಿಸುತ್ತಿ, ಅವರ ನಿಯಂತ್ರಣವೂ ಕಷ್ಟವಾಗಿದೆ.

ಮಳೆ ಇನ್ನೂ 2 ದಿನ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹಲವಾರು ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದ್ದರೆ, ಇನ್ನು ಹಲವು ವಿಮಾನಗಳ ದಿಕ್ಕನ್ನು ಬದಲಿಸಲಾಗಿದೆ. ಭಾರಿ ಮಳೆ, ಪ್ರವಾಹದಿಂದ ಸಾವಿರಾರು ವಾಹನಗಳು ಮುಳುಗಿದ್ದು, ಕೊಟ್ಯಾಂತರ ರೂ ಹಾನಿಯಾಗಿದೆ. ಮುಂಬೈ ಮಹಾನಗರದ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button