Kannada NewsKarnataka NewsLatest

ಕೊರೋನಾ 3ನೇ ಅಲೆ ಬೆಳಗಾವಿಯಲ್ಲಿ ಭಾನುವಾರ ಸೋಂಕಿತರ ಸಂಖ್ಯೆ ಹೊಸ ಎತ್ತರಕ್ಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯದಲ್ಲಿ ಭಾನುವಾರ 34,047  ಜನರಿಗೆ ಕೊರೋನಾ ದೃಢಪಟ್ಟಿದೆ.

ಬೆಳಗಾವಿ ಜಿಲ್ಲೆಯಲ್ಲೂ ಭಾನುವಾರ ಕೊರೋನಾ ಸೋಂಕಿತರ ಸಂಖ್ಯೆ ಹೊಸ ಎತ್ತರಕ್ಕೇರಿದೆ. ಒಂದೇ ದಿನ 468 ಜನರಲ್ಲಿ ಸೋಂಕು ದೃಢಪಟ್ಟಿದೆ.

Home add -Advt

ಬೆಳಗಾವಿ ನಗರದಲ್ಲಿ 264, ಬೈಲಹೊಂಗಲದಲ್ಲಿ 60 ಜನರಿಗೆ ಸೋಂಕು ಪತ್ತೆಯಾಗಿದೆ. ಅಥಮಿ 33, ಚಿಕ್ಕೋಡಿ 31, ಗೋಕಾಕ ಹಾಗೂ ರಾಯಬಾಗ ತಲಾ 22, ಹುಕ್ಕೇರಿ 13, ರಾಮದುರ್ಗ 9, ಸವದತ್ತಿ 8, ಖಾನಾಪುರ 4, ಇತರೆ 2 ಜನರಿಗೆ ಸೋಂಕು ದೃಢಪಟ್ಟಿದೆ.

ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ತೀವ್ರವಾಗಿ ಏರುತ್ತಿದೆ. ಸೋಮವಾರದಿಂದ ಮತ್ತೆ ಶಾಲೆಗಳು ಆರಂಭವಾಗುತ್ತಿದ್ದು, ವಿದ್ಯಾರ್ಥಿ -ಪಾಲಕರಲ್ಲಿ ತೀವ್ರ ಆತಂಕ ಮನೆ ಮಾಡಿದೆ.

ಬೆಳಗಾವಿ: ಮತ್ತೋರ್ವ ವಿದ್ಯಾರ್ಥಿನಿ ನಾಪತ್ತೆ

Related Articles

Back to top button