Film & EntertainmentKannada NewsKarnataka News

*ನಟ ದರ್ಶನ ಹಾಗೂ ಸಹಚರರ ನ್ಯಾಯಾಂಗ ಬಂಧನದ ಅವಧಿ ಇಂದು ಮುಕ್ತಾಯ*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಗಿರುವ ನಟ ದರ್ಶನ್ ಮತ್ತು ಸಹಚರರ ನ್ಯಾಯಾಂಗ ಬಂಧನದ ಅವಧಿ ಗುರುವಾರಕ್ಕೆ ಮುಕ್ತಾಯವಾಗಲಿದೆ. ಹೀಗಾಗಿ ಇಂದು ಪೊಲೀಸರು ಮತ್ತೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ, ನ್ಯಾಯಾಂಗ ಬಂಧನ ವಿಸ್ತರಣೆಗೆ ಮನವಿ ಸಲ್ಲಿಸುವ ಸಾಧ್ಯತೆಯಿದೆ.

ಈ ದಿನದ ಪ್ರಕ್ರಿಯೆಯನ್ನು ವಿಡಿಯೋ ಕಾನ್ವರೆನ್ಸ್ ಮೂಲಕ ನಡೆಸಲು ಪೊಲೀಸರು ನಿರ್ಧರಿಸಿದ್ದು, ದರ್ಶನ್ ಮತ್ತು ತಂಡದ ವಿಚಾರಣೆ ಪರಪ್ಪನ ಅಗ್ರಹಾರದಲ್ಲಿಯೇ ನಡೆಯಲಿದೆ.

ಇದೇ ವೇಳೆ ಜೈಲೂಟದಿಂದ ಆರೋಗ್ಯ ಸಮಸ್ಯೆ ಉಂಟಾಗಿದ್ದು, ಮನೆಯ ಊಟ ನೀಡುವಂತೆ ಅನುಮತಿ ಕೋರಿ ನಟ ದರ್ಶನ್ ವಕೀಲರು ಸಲ್ಲಿಸಿರುವ ಮನವಿಯೂ ಸಹ ವಿಚಾರಣೆಗೆ ಬರಲಿದೆ. ಕಳೆದ ಬಾರಿ ಈ ಪ್ರಸ್ತಾಪವನ್ನು ಪರಿಶೀಲಿಸಿದ್ದ ನ್ಯಾಯಾಲಯ ಈ ಬಗ್ಗೆ ಎಲ್ಲಾ ಕೈದಿಗಳಿಗೂ ಜೈಲು ನಿಯಮ ಏನು ಹೇಳುತ್ತದೆಯೋ ಅದೇ ನಿಯಮವನ್ನು ದರ್ಶನ್ ಗೂ ಅನ್ವಯಿಸಿ. ಯಾವುದೇ ವಿನಾಯಿತಿ ಬೇಡ ಎಂದಿತ್ತು.‌

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button