ಕನ್ನಡ ಉಳಿಸಿ ಬೆಳೆಸುವಲ್ಲಿ ಕೆಎಲ್ಇ ಸಂಸ್ಥೆ ಪಾತ್ರ ಬಹುಮುಖ್ಯ
೬೯ನೇ ಕರ್ನಾಟಕ ರಾಜ್ಯೋತ್ಸವ
ಚಿಕ್ಕೋಡಿಯ ಕೆ.ಎಲ್.ಇ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಾಲೇಜಿನ ಕನ್ನಡ ಬಳಗದ ವತಿಯಿಂದ ೬೯ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರಸಾದ ರಾಂಪೂರೆ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ : ಕನ್ನಡಕ್ಕೆ ೮ ಜ್ಞಾನಪಿಠ ಪ್ರಶಸ್ತಿಗಳು ಬಂದಿರುವುದು ಹೆಮ್ಮೆಯ ವಿಷಯ. ಬೆಳಗಾವಿಯಲ್ಲಿ ಮುಂಚೆ ಕನ್ನಡ ಮಾತನಾಡುವವರು ಸಿಗುತ್ತಿರಲಿಲ್ಲ, ಇಂದು ಬೆಳಗಾವಿ ಕನ್ನಡಮಯವಾಗಿದೆ. ಕನ್ನಡವನ್ನು ಉಳಿಸುವಲ್ಲಿ ಬೆಳೆಸುವಲ್ಲಿ ಕೆ ಎಲ್ ಇ ಸಂಸ್ಥೆ ಬಹುಮುಖ್ಯ ಪಾತ್ರ ವಹಿಸಿದೆ. ದ. ರಾ. ಬೆಂದ್ರೆ, ಮಾಸ್ತಿ ವೆಂಕಟೆಶ್ ಅಯ್ಯಂಗಾರ್, ಗಿರಿಶ್ ಕಾರ್ನಾಡ್ ಬೇರೆ ಮಾತೃಭಾಷೆಯವರಾದರೂ ಸಹಿತ ಕನ್ನಡಕ್ಕೆ ತಮ್ಮದೇಯಾದ ಕೊಡುಗೆ ನೀಡಿರುವುದು ಶ್ಲಾಘಣಿಯ.
ಜಗತ್ತಿನ ೧೫,೦೦೦ ಸಾವಿರ ಭಾಷೆಗಳಲ್ಲಿ ೧೦,೦೦೦ ನಶಿಸಿ ಹೋಗಿ, ಕೇವಲ ೫,೦೦೦ ಉಳಿದಿವೆ. ಅದರಲ್ಲಿ ಕನ್ನಡವು ಒಂದು. ಈ ನಿಟ್ಟಿನಲ್ಲಿ ಕನ್ನಡವು ಸಹಿತ ನಶಿಸಿ ಹೊಗದಂತೆ ನಾವು ಎಚ್ಚರವಾಗಬೇಕಾಗಿದೆ. ಕನ್ನಡ ಮಾತನಾಡುವ, ಕನ್ನಡ ಪತ್ರಿಕೆಗಳನ್ನು ಓದುವ, ಪದಬಂಧಗಳನ್ನ ಬಿಡಿಸುವ ಹವ್ಯಾಸ ಬೆಳೆಸಿಕೊಳ್ಳಿ ಎಂದರು.
ಭಾಷೆ ಇಲ್ಲದೇ ಜನತೆ ಇಲ್ಲ, ಸಂಸ್ಕೃತಿ ಇಲ್ಲ. ಭಾಷೆ ಅಳಿದರೆ, ನಾಡು ನಾಶ, ಸಂಸ್ಕೃತಿ ನಾಶ. ಕನ್ನಡ ಭಾಷೆಯಲ್ಲ, ಅದು ಸಂಸ್ಕೃತಿ, ಸಂಸ್ಕಾರ, ಪರಂಪರೆ, ಜೀವನಾಡಿ. ಕನ್ನಡ ಪ್ರಾಚೀನ ಭಾಷೆ, ತರ್ಕಬದ್ಧ, ವ್ಯಾಕರಣಬದ್ಧ ಭಾಷೆ. ಕನ್ನಡ ವಾರ್ಷಿಕೊತ್ಸವಕ್ಕೆ ಸಿಮಿತವಾಗದೇ, ಕನ್ನಡ ನಿತ್ಯೋತ್ಸವವಾಗಬೇಕು ಎಂದರು.
ಸಂಯೋಜಕರಾದ ಡಾ. ಬಾಹುಬಲಿ ಅಕಿವಾಟೆ ಸ್ವಾಗತಿಸಿದರು. ಡಾ. ಸಚೀನ ಮೆಕ್ಕಳಕಿ ವಂದಿಸಿದರು. ಸ್ನೇಹಾ ಶಿರಹಟ್ಟಿ ಹಾಗೂ ರವೀನಾ ಕುಣ್ಣುರೆ ನಿರೂಪಿಸಿದರು. ವಿದ್ಯಾರ್ಥಿ ಸೌರಭ ಪಾಟೀಲ ಉಪನ್ಯಾಸಕರಾದ ವಿರಣ್ಣಾ ಮೋದಿ ಮಾತನಾಡಿದರು.
ದೀಪಕ ಮಾನೆ, ಅರ್ಪಿತಾ ಮರಜಕ್ಕೆ, ಕಾರ್ತಿಕ ಚನ್ನವರ ಉಪನ್ಯಾಸಕರಾದ ಶಂಕರಗೌಡಾ ಪಾಟೀಲ ತಮ್ಮ ಸುಮಧುರ ಕಂಠದಿಂದ ಕನ್ನಡದ ಪ್ರೀತಿ ಹೆಚ್ಚಿಸಿದರು.
ಪ್ರೊ. ಕುಮಾರ ಚೌಗಲಾ, ಡಾ. ಮಹಾಂತಯ್ಯ ಮಠಪತಿ, ಡಾ. ಸಚೀನ ಮೆಕ್ಕಳಕಿ, ಪ್ರೊ. ಸುನೀಲ ಶಿಂಧೆ ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ