Kannada NewsKarnataka News

ಯುವಕ ನಾಪತ್ತೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿನ ಹನುಮಾನ ನಗರದ ಹಿಂದವಾಡಿ ಗುಮ್ಮಟಮಾಳ ಮಾರುತಿ ಮಂದಿರ ಹತ್ತಿರದ ಮನೆ ನಂ- ೪೪, ನಿವಾಸಿ ಪ್ರಜ್ವಲ್ ಬಸವರಾಜ ಮಹಾಂತಶೆಟ್ಟಿ(೨೪) ಎಂಬ ಯುವಕ ಕಾಣೆಯಾಗಿದ್ದಾನೆ.

ನಾಪತ್ತೆಯಾದ ವ್ಯಕ್ತಿಯು ಬೆಳಗಾವಿ ತಿಲಕವಾಡಿ ಖಾನಾಪೂರ ರಸ್ತೆಯ ಪಕ್ಕದಲ್ಲಿರುವ ವಿನಯಾ ಕಾಲೇಜ ಆಫ್ ಪಾರ್ಮಸಿಯಲ್ಲಿ ೧ನೇ ವರ್ಷದ ಡಿ ಪಾರ್ಮಸಿಯಲ್ಲಿ ಓದುತ್ತಿದ್ದು, ಇವನು ಇತ್ತೀಚಿಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರಿಂದ ಮನೋವೈದ್ಯರಿಂದ ಉಪಚಾರ ಮಾಡಿಸುತ್ತಿದ್ದರು. ಆದರೆ ಫೆಬ್ರವರಿ ೯ ರಂದು ಮನೆಯಲ್ಲಿ ತನ್ನ ತಾಯಿಗೆ ವಾಕಿಂಗ್ ಹೋಗಿ ಬರುತ್ತೇನೆ ಎಂದು ಹೇಳಿ ಹೋದವನು ಮರಳಿ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾನೆ.

ವ್ಯಕ್ತಿಯ ವರ್ಣನೆ:
ಕಾಣೆಯಾದ ವ್ಯಕ್ತಿಯು ೨೪ ವಯಸ್ಸು, ಬಿಳಿ ಮೈಬಣ್ಣ, ದುಂಡು ಮುಖ, ಉದ್ದ ಮೂಗು ಮತ್ತು ಸದೃಢ ದೇಹ ಹೊಂದಿರುತ್ತಾನೆ. ಹಸಿರು ಮತ್ತು ಬ್ರೌನ್ ಬಣ್ಣದ ಪಟ್ಟಿ ಇರುವ ಗ್ರೇ ಬಣ್ಣದ ಟೀ ಶರ್ಟ್ ಮತ್ತು ಬಿಳಿ ಶಾರ್ಟ್ಸ್ ಕಾಲಲ್ಲಿ ಟಿಟೋ ಸ್ಯಾಂಡಲ್ ಧರಿಸಿರುತ್ತಾನೆ. ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಮಾತನಾಡುತ್ತಾನೆ.

ಈ ಕುರಿತು ಬೆಳಗಾವಿಯ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಣೆಯಾದ ಬಗ್ಗೆ ಮಾಹಿತಿ ಸಿಕ್ಕಲ್ಲಿ ತಿಲಕವಾಡಿಯ ಪೊಲೀಸ್ ಠಾಣೆ : ೦೮೩-೨೪೦೫೨೩೬, ಪೊಲೀಸ್ ಇನ್ಸ್ಪೆಕ್ಟರ್ : ೯೪೮೦೮೦೪೦೫೨, ಪಿಎಸ್ ಐ(ಕಾ&ಸು): ೯೪೮೦೮೦೪೧೧೨ ಮತ್ತು ಬೆಳಗಾವಿಯ ಪೊಲೀಸ್ ಕಂಟ್ರೋಲ್ ರೂಮ್: ೦೮೩೧&೨೪೦೫೨೩೧ / ೨೪೦೫೨೫೫ ಹಾಗೂ ಪಿರ್ಯಾದಿ: ೯೩೪೨೫೭೩೭೬೨ ಈ ನಂಬರಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ನಗರದ ತಿಲಕವಾಡಿ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

ಹನಿಮೂನ್ ನಲ್ಲಿ ಮೌನಿ ರಾಯ್ ಹಾಟ್ ಲುಕ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button