Kannada NewsKarnataka NewsLatest
15 ವರ್ಷದ ನಂತರ ಕೈಗೆ ಬಂತು ಲೇಬರ್ ಕಾರ್ಡ್ : ದಾಮಣೆ ಜನರ ಮುಖದಲ್ಲಿ ಸಂತಸ ಮೂಡಿಸಿದ ಲಕ್ಷ್ಮೀ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನರೇಗಾ ಯೋಜನೆ ಜಾರಿಯಾಗಿ 15 ವರ್ಷವಾದರೂ ಸೌಲಭ್ಯದಿಂದ ವಂಚಿತರಾಗಿದ್ದ ದಾಮಣೆ ಗ್ರಾಮದ ಜನರಿಗೆ ಲೇಬರ್ ಕಾರ್ಡ್ ಒದಗಿಸುವ ಮೂಲಕ ಅವರ ಮುಖದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಸಂತಸ ಮೂಡಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಳವಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಧಾಮಣೆ ಗ್ರಾಮದ ಜನರು ಕೆಲಸವಿಲ್ಲದೆ ತಮ್ಮ ಜೀವನ ಸಾಗಿಸಲಿಕ್ಕೆ ತೊಂದರೆಗಳನ್ನು ಅನುಭವಿಸುತ್ತಿದ್ದರು. ಈ ವಿಷಯ ಗಮನಕ್ಕೆ ಬಂದ ತಕ್ಷಣ ಗ್ರಾಮ ಪಂಚಾಯತಿ ಅಭಿವೃದ್ಧಿಯ ಅಧಿಕಾರಿ ಹಾಗೂ ನರೇಗಾ ಯೋಜನೆಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ತ್ವರಿತಗತಿಯಲ್ಲಿ ಈ ಜನರಿಗೆ ಲೇಬರ್ ಕಾರ್ಡ್ ಗಳನ್ನು ಮಾಡಿಸಿ, ಕೆಲಸವನ್ನು ಕೊಡಿಸಿದರು. ಜೊತೆಗೆ ಅವರೆಲ್ಲರ ಆರೋಗ್ಯದ ದೃಷ್ಟಿಯಿಂದ ಮೆಡಿಕಲ್ ಫರ್ಸ್ಟ್ ಏಡ್ ಕಿಟ್ ಗಳನ್ನು ಸಹ ವ್ಯವಸ್ಥೆ ಮಾಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀದೇವಿ ಹಿರೇಮಠ ಮತ್ತು ಸಿಬ್ಬಂದಿ ಮೂಲಕ ವಿತರಿಸಲು ವ್ಯವಸ್ಥೆ ಮಾಡಿದರು.
ನರೇಗಾ ಯೋಜನೆ 2007ರಲ್ಲಿ ಪ್ರಾರಂಭವಾಗಿದ್ದರೂ ಈ ಹಿಂದಿನ ಶಾಸಕರು ಈ ಗ್ರಾಮದ ಬಗ್ಗೆಯಾಗಲಿ, ಜನರ ಸಮಸ್ಯೆಗಳ ಬಗ್ಗೆಯಾಗಲಿ ತಲೆಕೆಡಿಸಿಕೊಂಡಿರಲಿಲ್ಲ.ಈ ವಿಷಯ ಗಮನಕ್ಕೆ ಬಂದ ತಕ್ಷಣ ಅವರಿಗೆ ನರೇಗಾ ಯೋಜನೆಯಡಿಯಲ್ಲಿ ಕೆಲಸವನ್ನು ಕಲ್ಪಿಸಿಕೊಟ್ಟು ಅವರ ಮುಖದಲ್ಲಿ ಮಂದಹಾಸ ತರುವುದರಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಯಶಸ್ವಿಯಾದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ