
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯಾದ್ಯಂತ ಕಾಲೇಜುಗಳಿಗೆ ರಜೆ ವಿಸ್ತರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳಿಗೆ ಫೆಬ್ರವರಿ 16ರ ವರೆಗೆ ರಜೆ ವಿಸ್ತರಣೆ ಮಾಡಲಾಗಿದೆ.
ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಸರಕಾರ 3 ದಿನ ರಜೆ ಘೋಷಿಸಿತ್ತು. ಅದು ಇಂದಿಗೆ ಮುಗಿದಿತ್ತು. ಆದರೆ ಇದೀಗ ಮತ್ತು ಫೆಬ್ರವರಿ 16ರ ವರೆಗೆ ರಜೆ ವಿಸ್ತರಿಸಲಾಗಿದೆ. ಪರಿಸ್ಥಿತಿ ನೋಡಿಕೊಂಡು ಮುಂದೆ ರಜೆ ವಿಸ್ತರಿಸುವ ಸಂಬಂಧ ನಿರ್ಧರಿಸಲಾಗುವುದು.
ಸೋಮವಾರದಿಂದ ಹೈಸ್ಕೂಲ್ ಆರಂಭವಾಗಲಿದೆ.
ಶಾಲೆಗಳಿಗೆ ರಜೆ: CM ಆದೇಶ ಬದಲಾವಣೆ ಮಾಡಿ ಗೊಂದಲ