ಕ್ಷುದ್ರ ಶಕ್ತಿ ಒಲಿಸಿಕೊಳ್ಳಲು ನರ ಬಲಿಗೆ ಹೊರಟಿದ್ದ ಮೂವರ ಬಂಧನ

ಥಾಣೆ –  ೯ ವರ್ಷದ ಬಾಲಕನನ್ನು ಅಪಹರಿಸಿ ನರ ಬಲಿ ನೀಡಲು ಮುಂದಾಗಿದ್ದ ಮೂವರನ್ನು ಪೊಲೀಸರು ಬಂಧಿಸಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ಕುಲದೀಪ್ ನಿಕ್ಕಂ, ಕಿಶೋರ್ ನವಲೆ ಮತ್ತು ಸ್ನೇಹಾಶ ಶಿಂಧೆ ಬಂಧಿತ ಆರೋಪಿಗಳು. ಇವರು ಬ್ಲ್ಯಾಕ್ ಮಾಜಿಕ್ ಮೂಲಕ ಕ್ಷುದ್ರ ಶಕ್ತಿಗಳನ್ನು ಒಲಿಸಿಕೊಳ್ಳುವ ಸಲುವಾಗಿ ನರ ಬಲಿ ನೀಡಲು ಮುಂದಾಗಿದ್ದರು. ಸ್ವತಃ ನಿಕ್ಕಂನ ಸಹೋದರಿಯ ೯ ವರ್ಷದ ಮಗನನ್ನೇ ಬಲಿ ನೀಡುವ ಸಲುವಾಗಿ ಅಪಹರಿಸಿದ್ದರು. ನಿಕ್ಕಂನ ಸಹೋದರಿ ಪೊಲೀಸರಿಗೆ ದೂರು ನೀಡಿದ್ದ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರನ್ನೂ ಬಂಧಿಸಿದ್ದಾರೆ. ಬಂಧಿತರಿಂದ ಲ್ಯಾಪ್ ಟಾಪ್‌ಗಳು, ಸ್ಮಾರ್ಟ್ ಫೋನ್‌ಗಳು ಮತ್ತಿತರ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ಬ್ಲಾಕ್ ಮಾಜಿಕ್ ಆಕ್ಟ್ ೨೦೧೩, ಪೋಕ್ಸೊ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ವಾಗ್ಲೆ ಎಸ್ಟೇಟ್‌ನ ಡಿಸಿಪಿ ಡಾ. ವಿನಯ್ ರಾಠೋಡ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ನಮಗಿಬ್ರಿಗೂ ಸೇರಿ ಒಬ್ಬನೇ ಪತಿ ಬೇಕು ಎಂದ ಗೆಳತಿಯರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button