Latest

ಹುಲಿ ದಾಳಿಗೆ ಬಲಿಯಾದ ವನಪಾಲಕಿ

ಪ್ರಗತಿವಾಹಿನಿ ಸುದ್ದಿ; ಮುಂಬೈ: ರಕ್ಷಿತಾರಾಣ್ಯದಲ್ಲಿ ಹುಲಿ ಗಣತಿಯಲ್ಲಿ ನಿರತರಾಗಿದ್ದ ಮಹಿಳಾ ವನಪಾಲಕರೊಬ್ಬರು ಹುಲಿ ದಾಳಿಗೆ ಬಲಿಯಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಇಲ್ಲಿನ ಚಂದ್ರಾಪುರದ ತಡೋಬಾ ಹುಲಿ ರಕ್ಷಿತಾರಣ್ಯದಲ್ಲಿ ಈ ಘಟನೆ ಸಂಭವಿಸಿದೆ. ಮೃತ ಮಹಿಳಾ ಸಿಬ್ಬಂದಿಯನ್ನು ಸ್ವಾತಿ ದುಮಾನೆ ಎಂದು ಗುರುತಿಸಲಾಗಿದೆ.

Home add -Advt

ಸ್ವಾತಿ ದುಮಾನೆ ಮೂವರು ಅರಣ್ಯ ಸಿಬ್ಬಂದಿಗಳ ಜೊತೆ ರಕ್ಷಿತಾರಣ್ಯದಲ್ಲಿ ಹುಲಿ ಗಣತಿಗೆ ತೆರಳಿದ್ದರು. ಕರ್ತವ್ಯದಲ್ಲಿರುವಾಗಲೇ ಹುಲಿ ದಾಳಿ ನಡೆಸಿದೆ. ಮೃತ ಸ್ವಾತಿ ಕುಟುಂಬಕ್ಕೆ ನೆರವು ನೀಡುವುದಾಗಿ ಮಹಾರಾಷ್ಟ್ರ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Related Articles

Back to top button