Latest

ಪೂರ್ವ ಸಿದ್ಧತಾ ಪರೀಕ್ಷೆಯನ್ನು ಚೆನ್ನಾಗಿ ಬರೆಯಲು SSLC ವಿದ್ಯಾರ್ಥಿಗಳಿಗೆ ಸಲಹೆಗಳು

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪೂರ್ವ ಸಿದ್ಧತಾ ಪರೀಕ್ಷೆಯನ್ನು ಚೆನ್ನಾಗಿ ಬರೆಯಲು SSLC ವಿದ್ಯಾರ್ಥಿಗಳಿಗೆ ತಜ್ಞರು ನೀಡಿರುವ ಸಲಹೆಗಳು. ಆದಷ್ಟು ಹೆಚ್ಚು ಜನರಿಗೆ ಶೇರ್ ಮಾಡಿ, ಅವರಿಗೂ ಸಹಾಯವಾಗಲಿ.

1) ಪರೀಕ್ಷೆಯ ಹಿಂದಿನ ದಿನವೂ ಚೆನ್ನಾಗಿ *ಪುನರಾವರ್ತನೆ ಮಾಡಿಕೊಳ್ಳಿ*, pens ಮತ್ತು ಇತರೆ ಅಗತ್ಯ *ವಸ್ತುಗಳನ್ನು* ಒಂದು ಕಡೆ *ಜೋಡಿಸಿಟ್ಟುಕೊಳ್ಳಿ* .

2) ಪರೀಕ್ಷೆಯ ಹಿಂದಿನ ದಿನ ರಾತ್ರಿ ಮಲಗುವಾಗ 5 ನಿಮಿಷಗಳ ಕಾಲ ಮಾರನೆಯ ದಿನ ಪರೀಕ್ಷೆಯಲ್ಲಿ ಬರೆಯುವ ವಿಷಯಗಳು ತುಂಬಾ ಸುಲಭವಾಗಿ ಇರುವಂತೆಯೂ, ನೀವು ಚೆನ್ನಾಗಿ ಬರೆಯುತ್ತಿರುವಂತೆಯೂ ಮತ್ತು ನಿಮಗೆ ಉತ್ತಮ ಅಂಕಗಳು ಬಂದು ಎಲ್ಲರೂ ನಿಮ್ಮನ್ನು ಪ್ರಶಂಸಿಸುತ್ತಿರುವಂತೆಯೂ *ಕಲ್ಪಿಸಿಕೊಳ್ಳಿ* . ಇದು ನಿಮ್ಮಲ್ಲಿ *ಧೈರ್ಯ* ಮತ್ತು *ಆತ್ಮ ವಿಶ್ವಾಸವನ್ನು* ಮೂಡಿಸುತ್ತದೆ.

3) ಪರೀಕ್ಷೆ ಪ್ರಾರಂಭವಾಗಲು ಇನ್ನೂ ಒಂದು ಗಂಟೆ ಇದೆ ಎನ್ನುವಾಗಲೇ ನೀವು ಓದುವುದನ್ನು ನಿಲ್ಲಿಸಿ ಮತ್ತು *ಮೌನದಿಂದ* ಇರಿ. ಮನಸ್ಸು ಪ್ರಶಾಂತವಾಗುತ್ತದೆ.

4) ಪರೀಕ್ಷಾ ಕೊಠಡಿಗೆ ಹೋದಾಗ 5-10 ನಿಮಿಷಗಳ ಕಾಲ *ಧ್ಯಾನ* ಮಾಡಿ. ನಿಮ್ಮ ಮೆದುಳು State of Monkey Mind ನಿಂದ state of Steady and focused mind ಗೆ ಬದಲಾಗುತ್ತದೆ.

5) ಪ್ರಶ್ನೆ ಪತ್ರಿಕೆಯನ್ನು, ಪ್ರಶಸ್ತಿ ಪತ್ರವನ್ನು ಸ್ವೀಕರಿಸುವಂತೆ ಸಂತೋಷ ಮತ್ತು ನಗುಮುಖದಿಂದ ಸ್ವೀಕರಿಸಿ.

6) ಪರೀಕ್ಷೆಯಲ್ಲಿ ಸಾಧ್ಯವಾದಷ್ಟು ಶಾಂತವಾದ ಮತ್ತು ಉಲ್ಲಾಸದ ಮನಸ್ಥಿತಿ ಇರಲಿ. ಏಕೆಂದರೆ ನಿಮಲ್ಲಿ ಆಗ ಅಗತ್ಯವಾದ *neurotransmitterಗಳ ಉತ್ಪತ್ತಿ* ಯಾಗಿ ಕಲಿತ ಅಂಶಗಳನ್ನು ಚೆನ್ನಾಗಿ ನೆನಪಿಸಿಕೊಳ್ಳಲು ಮೆದುಳಿಗೆ ಸಹಾಯವಾಗುತ್ತದೆ.

7) ಪ್ರತಿ 30ನಿಮಿಷಗಳಿಗೊಮ್ಮೆ 30 ಸೆಕೆಂಡ್ ಗಳ *ದೀರ್ಘ ಉಸಿರಾಟ* ಮಾಡಿ. ಇದರಿಂದ ಮೆದುಳಿಗೆ ಹೆಚ್ಚು ಆಮ್ಲಜನಕದ ಪೂರೈಕೆಯಾಗಿ ಪರೀಕ್ಷೆ ಮುಗಿಯುವವರೆಗೂ ಮೆದುಳು ಕ್ರಿಯಾಶೀಲವಾಗಿರುತ್ತದೆ.

8) ಬರವಣಿಗೆ ಅಂದವಾಗಿರಲಿ. ಮೊದಲು ಚೆನ್ನಾಗಿ *ಗೊತ್ತಿರುವ ಪ್ರಶ್ನೆಗಳಿಗೆ* ಉತ್ತರಿಸಿ ನಂತರ *ಅರ್ಧ ಉತ್ತರ ತಿಳಿದಿರುವ*, ಕೊನೆಗೆ ಸ್ವಲ್ಪವೂ ಉತ್ತರ ತಿಳಿಯದಿರುವ ಪ್ರಶ್ನೆಗಳಿಗೆ ಆಲೋಚಿಸಿ ಸ್ವಲ್ಪವಾದರೂ ಉತ್ತರಿಸಿ.

9) ಉತ್ತರ ಪತ್ರಿಕೆಯನ್ನು ಹಿಂದಿರುಗಿಸುವ ಮೊದಲು ಬರೆದಿರುವ *ಉತ್ತರಗಳನ್ನು ಒಮ್ಮೆ ಪರಿಶೀಲಿಸಿ*, *ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿರುವುದನ್ನು* ಖಚಿತಪಡಿಸಿಕೊಳ್ಳಿ ಮತ್ತು ನಿಮ್ಮ ಉತ್ತರದಲ್ಲಿರುವ *key pointsಗೆ underline ಮಾಡಿ.*

10) ಪರೀಕ್ಷಾ ಕೊಠಡಿಯಿಂದ ಹೊರಗಡೆ ಬಂದ ನಂತರ ಈಗಾಗಲೇ ಬರೆದಿರುವ ವಿಷಯಗಳ ಬಗ್ಗೆ ಯಾವುದನ್ನು ಬರೆದೆ, ಹೇಗೆ ಬರೆದೆ, ಎಷ್ಟು ಬರೆದೆ ಎಂದು *ಯಾರೊಂದಿಗೂ ಚರ್ಚಿಸದೇ* ನೇರವಾಗಿ ಮನೆಗೆ ಬಂದು ವಿಶ್ರಾಂತಿ ಪಡೆದು ಮುಂದೆ ಬರೆಯಬೇಕಾದ ವಿಷಯಗಳ ಬಗ್ಗೆ ಗಮನ ಹರಿಸಿ.

ಪ್ರೀತಿಯ ವಿದ್ಯಾರ್ಥಿಗಳೇ,
*ಪರೀಕ್ಷೆ ಒಂದು ಹಬ್ಬ.* ನೆನಪಿರಲಿ.
ಶುಭವಾಗಲಿ.

*ಅಧಿಕಾರಿಗಳು ಮತ್ತು ಶಿಕ್ಷಕ ರಲ್ಲಿ ವಿನಂತಿ:*

ದಯವಿಟ್ಟು ಈ ಮಾಹಿತಿಯನ್ನು SSLC ವಿದ್ಯಾರ್ಥಿಗಳಿಗೆ ತಲುಪಿಸಿ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button