Kannada NewsLatest

ಮತ್ತೊಂದು ಭೀಕರ ಅಪಘಾತ; ಬೆಳಗಾವಿ ಮೂಲದ ದಂಪತಿ ದುರ್ಮರಣ

ಬೆಳಗಾವಿ: ವಿಜಯಪುರ: ಟ್ರ್ಯಾಕ್ಟರ್ ಹಾಗೂ ಕ್ರೂಸರ್ ನಡುವೆ ಸಂಬಂವಿಸಿದ ಭೀಕರ ಅಪಘಾತದಲ್ಲಿ ದಂಪತಿ ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಧೂಳಖೇಡ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಭಯ್ಯಾಜಿ ಶಿಂಧೆ (50) ಹಾಗೂ ಪತ್ನಿ ಸುಮಿತ್ರಾ ಶಿಂಧೆ (45) ಮೃತರು. ಮೃತ ದಂಪತಿಗಳು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಿವಾಸಿಗಳು.

ಕಬ್ಬು ಸಾಗಿಸುತ್ತಿದ್ದಾಗ ಟ್ಯ್ರಾಕ್ಟರ್ ಗೆ ಮಹಾರಾಷ್ಟ್ರದ ಅಕ್ಕಲಕೋಟಗೆ ತೆರಳುತ್ತಿದ್ದ ಕ್ರೂಸರ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ದಂಪತಿ ಸಾವನ್ನಪ್ಪಿದ್ದು, ಕ್ರೂಸರ್ ನಲ್ಲಿದ್ದ 9 ಜನರಿಗೆ ಗಾಯಗಳಾಗಿವೆ.

ಗಾಯಾಳುಗಳನ್ನು ಮಹಾರಾಷ್ಟ್ರದ ಸೊಲ್ಲಾಪುರ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕ್ರೂಸರ್ ನಲ್ಲಿದ್ದವರು ಅಕ್ಕಲಕೋಟದ ಸ್ವಾಮಿ ಸಮರ್ಥ ಕ್ಷೇತ್ರಕ್ಕೆ ತೆರಳುತ್ತಿದ್ದರು. ಘಟನಾ ಸ್ಥಳಕ್ಕೆ ಝಳಕಿ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Home add -Advt

ಸ್ವಚ್ಛತಾ ಅಭಿಯಾನದಿಂದ ಕೇಂದ್ರ ಸರಕಾರದ ಆದಾಯ ಎಷ್ಟು ಗೊತ್ತೇ?

https://pragati.taskdun.com/latest/govt-earned-hundreds-of-crores-by-selling-scrap/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button