Belagavi NewsBelgaum NewsCrimeKannada NewsKarnataka NewsNationalPolitics

*ಬೆಳಗಾವಿಯಲ್ಲಿ ಘೋರ ದುರಂತ: ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿವಾಹಿತ ಯುವಕ ಮತ್ತು ಆತನ ಪ್ರಿಯತಮೆ ಒಟ್ಟಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮಲಪ್ರಭಾ ನದಿಗೆ ಹಾರಿ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ರಾಮದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಮಲ್ಲಾಪುರ ಗ್ರಾಮದ ಜಗದೀಶ ಯಲ್ಲಪ್ಪ ಕವಳೇಕರ(27), ಗಂಗಮ್ಮಾ ತ್ಯಾಪಿ(25) ಮೃತ ದುರ್ದೈವಿಗಳು. 

ಎರಡನೇ ಮದುವೆಗೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರಿಯತಮೆಯೊಂದಿಗೆ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿವಾಹಿತ ಯುವಕನ ಹೆಂಡತಿ ಪ್ರಥಮ ಹೆರಿಗೆಗಾಗಿ ತವರುಮನೆ ಬೋಚಬಾಳ ಗ್ರಾಮಕ್ಕೆ ತೆರಳಿದ್ದಳು. ಆಕೆ ಬಂದ ನಂತರ ಎರಡನೇಯ ಮದುವೆಯ ವಿಚಾರಕ್ಕೆ ಇತ್ಯರ್ಥ ಕಂಡುಕೊಳ್ಳೋಣ ಎಂದು ಮನೆಯವರು ಆಕ್ಷೇಪ ವ್ಯಕ್ತಪಡಿಸಿದಾಗ ಮಾತಿಗೆ ಮಾತು ಬೆಳೆದಿತ್ತು ಎಂದು ಹೇಳಲಾಗಿದೆ. ಸೋಮವಾರವೇ ಮನೆ ತೊರೆದ ಇಬ್ಬರೂ ಬುಧವಾರ ಬೆಳಿಗ್ಗೆ ಮಲಪ್ರಭಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.‌

Home add -Advt

ಸೋಮವಾರ ಬೆಳಿಗ್ಗೆ ರಾಮದುರ್ಗದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಎರಡು ಶವಗಳನ್ನು ಹೊರಕ್ಕೆ ತೆಗೆದಿದ್ದಾರೆ. ಇಬ್ಬರೂ ಅಪ್ಪಿಕೊಂಡು ನೀರಿಗೆ ಬಿದ್ದಿದ್ದು, ಶವವಾಗಿಯೂ ಅಪ್ಪಕೊಂಡಿದ್ದರು. ಹಾಗೆಯೇ ಹೊರ ತೆಗೆದಾಗ ಈ ವೇಳೆ ಅಲ್ಲಿದ್ದ ಜನರು ಮರುಕಪಟ್ಟರು.

ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ರಾಮದುರ್ಗ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಶವಗಳನ್ನು ಹೊರಗೆ ತೆಗೆದಿದ್ದಾರೆ. 

ಮೃತರಾದ ಜಗದೀಶ ಮತ್ತು ಗಂಗಮ್ಮಾ ಇಬ್ಬರು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ ಆದರೆ, ಮನೆಯಲ್ಲಿ ಮದುವೆಗೆ ಕುಟುಂಬಸ್ಥರು ಒಪ್ಪಿರಲಿಲ್ಲ. ಹಾಗಾಗಿ, ಒಂದು ವರ್ಷದ ಹಿಂದೆಯಷ್ಟೇ ಬೇರೆ ಯುವತಿ ಜೊತೆಗೆ ಜಗದೀಶ ಮದುವೆ ಆಗಿತ್ತು. 

ಈಗ ಇಬ್ಬರು ಜೊತೆಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನಿಖೆ ಕೈಗೊಂಡಿದ್ದೇವೆ ಎಂದು ರಾಮದುರ್ಗ ಪೊಲೀಸರು ಮಾಹಿತಿ ನೀಡಿದ್ದಾರೆ.

Related Articles

Back to top button