Latest

 ಕಾರಿನ ಸ್ಟೆಪ್ನಿಯಲ್ಲಿ 94 ಬಂಡಲ್ ನಗದು ಪತ್ತೆ: ಬಿಜೆಪಿ ಹವಾಲಾ ಹಣ ಎಂದ ದೀದಿ

ಪ್ರಗತಿವಾಹಿನಿ ಸುದ್ದಿ, ಕೋಲ್ಕೊತ್ತಾ:  ಕಾರೊಂದರ ಸ್ಟೆಪ್ನಿಯಲ್ಲಿ ಇರಿಸಿಕೊಂಡು ಕಳ್ಳಸಾಗಣೆ ಮಾಡಲಾಗುತ್ತಿದ್ದ 93.83 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.

ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ಇದನ್ನು ವಶಕ್ಕೆ ಪಡೆದ ಒಂದು ದಿನದ ನಂತರ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಹಣ ಬಿಜೆಪಿಗೆ ಸಂಬಂಧಪಟ್ಟಿದ್ದು ಎಂದು ಆರೋಪಿಸಿದ್ದಾರೆ.

“ಇದು ಹವಾಲಾ ಎಂದು ನನಗೆ ತಿಳಿದಿದೆ. ಬಿಜೆಪಿಯವರು ಕೇಂದ್ರ ಭದ್ರತಾ ಪಡೆಗಳ ಸಹಾಯದಿಂದ ಹಣ, ಗೂಂಡಾಗಳು ಮತ್ತು ಬಂದೂಕುಗಳನ್ನು ತರುತ್ತಿದ್ದಾರೆ. ಆದ್ದರಿಂದ ಪೊಲೀಸರು ಕ್ರಾಸ್ ಚೆಕ್ ಮಾಡಲು ಸಹ ಸಾಧ್ಯವಿಲ್ಲ,” ಎಂದು ಅವರು ದೂರಿದರು.

ಖಚಿತ ಸುಳಿವಿನ ಮೇರೆಗೆ ಬಿನ್ನಗುರಿ ಪೊಲೀಸ್ ಹೊರಠಾಣೆ ಅಧಿಕಾರಿಗಳು ಭಾನುವಾರ ಸಂಜೆ ಬನಾರ್ಹತ್ ಪ್ರದೇಶದಲ್ಲಿ ಏಷ್ಯನ್ ಹೈವೇ (AH)-48 ರಲ್ಲಿ ಬಿಹಾರ-ನೋಂದಾಯಿತ ಎಸ್‌ಯುವಿಯನ್ನು ತಡೆದು ತಪಾಸಣೆ ನಡೆಸಿದಾಗ ನಗದು ಕಳ್ಳಸಾಗಣೆ ಪತ್ತೆಯಾಗಿತ್ತು.

ರಣಾಂಗಣವಾದ ಹಿರೇಬಾಗೆವಾಡಿ ರಸ್ತೆ; ಮಹಾರಾಷ್ಟ್ರ ವಾಹನಗಳ ಮೇಲೆ ಕರವೇ ಕಲ್ಲುತೂರಾಟ

Related Articles

Back to top button