Latest

10ಕ್ಕೂ ಹೆಚ್ಚು ರೈಲುಗಳು ರದ್ದು; 14 ರೈಲುಗಳ ಸಂಚಾರ ವ್ಯತ್ಯಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರೈಲು ಮಾರ್ಗ ದುರಸ್ಥಿ ಹಿನ್ನೆಲೆಯಲ್ಲಿ ಯಲಹಂಕ-ಪೆನುಕೊಂಡ ಮಾರ್ಗದ ಹಲವು ರೈಲುಗಳನ್ನು ರದ್ದುಪಡಿಸಲಾಗಿದ್ದಎ ಇನ್ನು ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.

ಮಾರ್ಚ್ 29ರವರೆಗೆ ಪೆನುಕೊಂಡ ಮಾರ್ಗದಲ್ಲಿ 10ಕ್ಕೂ ಹೆಚ್ಚು ರೈಲುಗಳನ್ನು ರದ್ದುಪಡಿಸಲಾಗಿದೆ. 14 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಯಲಹಂಕ-ಪೆನುಕೊಂಡ ಮಾರ್ಗದಲ್ಲಿ ಬಿದ್ಯುದೀಕರಣ ಮತ್ತು ದ್ವಿಪಥ ಕಾಮಗಾರಿ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.

ಟಿಕೆಟ್ ಬುಕ್ ಮಾಡಿರುವ ಪ್ರಯಾಣಿಕರಿಗೆ ಮಾರ್ಗ ಬದಲಾವಣೆ ಕುರಿತು ಎಸ್​ಎಂಎಸ್​ಗಳನ್ನು ಕಳಿಸಲಾಗಿದೆ. ಅಂತರ ಹೆಚ್ಚಾಗುವ ಕಾರಣ ಪ್ರಯಾಣದ ಅವಧಿಯೂ ಹೆಚ್ಚಾಗಲಿದೆ. ಇಂಥವರಿಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕಾಗಿ ಹೆಚ್ಚುವರಿಯಾಗಿ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ರದ್ದುಪಡಿಸುವ ಟಿಕೆಟ್​ಗಳಿಗೆ ನಿಯಮಗಳ ಪ್ರಕಾರ ಹಣವನ್ನು ರಿಫಂಡ್ ಮಾಡಲಾಗುವುದು ಎಂದು ರೈಲ್ವೆ ಇಲಾಖೆಯ ವಾಣಿಜ್ಯ ವಿಭಾಗ ತಿಳಿಸಿದೆ.

ರದ್ದಾದ ರೈಲುಗಳು
1) ಧರ್ಮಾವರಂ-ಬೆಂಗಳೂರು ಕಂಟೋನ್​ಮೆಂಟ್ ಮೆಮು
2) ಸಿಕಂದ್ರಾಬಾದ್-ಯಶವಂತಪುರ ಗರೀಬ್​ರಥ್ ಎಕ್ಸ್​ಪ್ರೆಸ್
3) ಮುಂಬೈ-ಬೆಂಗಳೂರು ಉದ್ಯಾನ್ ಎಕ್ಸ್​ಪ್ರೆಸ್
4) ಸೊಲ್ಲಾಪುರ-ಹಾಸನ ಡೈಲಿ ಎಕ್ಸ್​ಪ್ರೆಸ್
5) ಯಶವಂತಪುರ-ಡಾ.ಅಂಬೇಡ್ಕರ್ ನಗರ ವೀಕ್ಲಿ ಎಕ್ಸ್​ಪ್ರೆಸ್
7) ಗುಂತಕಲ್-ಹಿಂದೂಪುರ ಮೆಮು
8) ಮಚಲೀಪಟ್ಟಣಂ-ಯಶವಂತಪುರ ಎಕ್ಸ್​ಪ್ರೆಸ್
9) ಭುವನೇಶ್ವರ-ಬೆಂಗಳೂರು ಪ್ರಶಾಂತಿ ಎಕ್ಸ್​ಪ್ರೆಸ್
10) ಕಾಚಿಗುಡ-ಯಲಹಂಕ
11) ಚೆನ್ನೈ-ಸತ್ಯಸಾಯಿ ಪ್ರಶಾಂತಿ ನಿಲಯಂ ವೀಕ್ಸಲಿ ಎಕ್ಸ್​ಪ್ರೆಸ್

Home add -Advt

ಈ ಮಾರ್ಗದಲ್ಲಿ ಸಂಚರಿಸುವ 14 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಪ್ರಯಾಣಿಕರು ಸಮೀಪದ ರೈಲ್ವೆ ನಿಲ್ದಾಣದಿಂದ ಮಾಹಿತಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ.

Related Articles

Back to top button