ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ವರ್ತಿಕಾ ಕಟಿಯಾರ್ ಸೇರಿದಂತೆ ಆರು ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ.
ಬೆಂಗಳೂರು ಕ್ರೈಮ್ ರೆಕಾರ್ಡ್ ಬ್ಯೂರೋದಲ್ಲಿದ್ದ ವರ್ತಿಕಾ ಕಟಿಯಾರ್ ಅವರನ್ನು ಉತ್ತರ ಕನ್ನಡ ಜಿಲ್ಲಾ ಎಸ್ಪಿಯಾಗಿ ವರ್ಗಾಯಿಸಲಾಗಿದೆ.
ಉತ್ತರ ಕನ್ನಡ ಎಸ್ಪಿ ಶಿವಪ್ರಕಾಶ ದೇವರಾಜು ಅವರಿಗೆ ಸ್ಥಾನ ತೋರಿಸಿಲ್ಲ.
ಸಿವಿಲ್ ರೈಟ್ಸ್ ಎನ್ ಫೋರ್ಸ್ ಮೆಂಟ್ ಎಸ್ಪಿ ಜಿ ಸಂಗೀತಾ ಅವರನ್ನು ಚಾಮರಾಜ ನಗರ ಎಸ್ಪಿಯಾಗಿ ವರ್ಗಾಯಿಸಲಾಗಿದೆ. ಚಾಮರಾಜ ನಗರ ಎಸ್ಪಿ ದಿವ್ಯ ಸಾರಾ ಥಾಮಸ್ ಅವರಿಗೆ ಜಾಗ ತೋರಿಸಿಲ್ಲ.
ಇಂಟರ್ನಲ್ ಸೆಕ್ಯುರಿಟಿ ಡಿವಿಸನ್ ಎಸ್ಪಿ ಎಚ್.ಡಿ.ಆನಂದಕುಮಾರ ಅವರನ್ನು ವಿಜಯಪುರ ಎಸ್ಪಿಯಾಗಿ ವರ್ಗಾಯಿಸಲಾಗಿದೆ. ವಿಜಯಪುರ ಎಸ್ಪಿ ಅನುಪಮ ಅಗರವಾಲ ಅವರಿಗೆ ಸ್ಥಳ ತೋರಿಸಿಲ್ಲ.
ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ – IPS Transfers
ಬಸ್ ವಾಪಸ್ ಕಳಿಸಿದ ಬೆಳಗಾವಿ ಪೊಲೀಸರು, ಕಾರಣ ಗೊತ್ತಾ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ