Latest

ಪ್ರೇಮ ವಿವಾಹಕ್ಕೆ ಅಡ್ಡಿ; ತಂಗಿಯ ಗಂಡನನ್ನೇ ಹತ್ಯೆಗೈದ ಅಣ್ಣ-ಚಿಕ್ಕಪ್ಪ

ಪ್ರಗತಿವಾಹಿನಿ ಸುದ್ದಿ; ತುಮಕೂರು: ಪ್ರೀತಿಸಿ ಮದುವೆಯಾದ ತಂಗಿಯ ಕುಂಕುಮ‌ವನ್ನ ಅಣ್ಣ, ಚಿಕ್ಕಪ್ಪ ಸೇರಿ ಅಳಿಸಿ ಹಾಕಿರುವ ಘಟನೆಯೊಂದು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ನಡೆದಿದೆ.

ಮನೆಯವರ ವಿರೋಧದ ನಡುವೆಯೂ ಪ್ರೀತಿಸಿದ ಹುಡುಗನನ್ನೇ ಎರಡು ತಿಂಗಳ ಹಿಂದಷ್ಟೇ ವಿವಾಹವಾವಾದ ತಂಗಿಯ ಪತಿಯನ್ನೇ ಅಣ್ಣ ಹಾಗೂ ಚಿಕ್ಕಪ್ಪ ಬರ್ಬರವಾಗಿ ‌ಕೊಲೆ ಮಾಡಿದ್ದಾರೆ. ಕೊಲೆಯಾದ ನವ ವಿವಾಹಿತನನ್ನು ಚೇತನ್ ಎಂದು ಗುರುತಿಸಲಾಗಿದೆ. ಆಕಾಶ್ ಮತ್ತು ನಂಜುಂಡೇಗೌಡ ಕೊಲೆ ಮಾಡಿದ ಆರೋಪಿಗಳು.

ಎರಡು ತಿಂಗಳ ಹಿಂದಷ್ಟೇ ಚೇತನ್ ಹಾಗೂ ಭೂಮಿಕಾ ಮದುವೆಯಾಗಿದ್ದರು. ಲಗ್ಗೆರೆ ಎಲ್ ಜಿ ರಾಮಣ್ಣ ಬಡಾವಣೆಯಲ್ಲಿ ನವಜೋಡಿಗಳು ವಾಸ ಮಾಡುತ್ತಿದ್ದರು ಎನ್ನಲಾಗಿದೆ. ಚೇತನ್ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಶುಭಾಶಯ ಕೋರುವ ನೆಪದಲ್ಲಿ ಬಂದಿದ್ದ ಆಕಾಶ್ ಮತ್ತು ಅವರ ಚಿಕ್ಕಪ್ಪ ಗಲಾಟೆ ಆರಂಭಿಸಿದ್ದಾರೆ. ಗಲಾಟೆ ಮಧ್ಯೆಯೆ ಚೇತನನ್ನು ಹತ್ಯೆಗೈದು ಇಬ್ಬರೂ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ರಾಜಗೋಪಾಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

Home add -Advt

Related Articles

Back to top button