
ಪ್ರಗತಿವಾಹಿನಿ ಸುದ್ದಿ; ಟರ್ಕಿ: ಟರ್ಕಿ ಹಾಗೂ ಸಿರಿಯಾದಲ್ಲಿ ಪ್ರಭಲ ಭೂಕಂಪ ಸಂಭವಿಸಿದ್ದು, 4000ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಟರ್ಕಿಯ ನೂರ್ಡಗಿಯಿಂದ ಪೂರ್ವಕ್ಕೆ 23 ಕಿ.ಮೀ ದೂರದಲ್ಲಿ ಭೂಮಿ ಕಂಪಿಸಿದೆ. ನೋಡ ನೋಡುತ್ತಿದ್ದಂತೆಯೇ ಸಾವಿರಾರು ಕತ್ಟದಗಳು ನೆಲಸಮವಾಗಿವೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.8ರಷ್ಟು ದಾಖಲಾಗಿದೆ.
ಸಾವಿರಾರು ಜನ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ಹಲವರು ನಾಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿಯಿದೆ. ಟರ್ಕಿಯಲ್ಲಿ 7 ದಿನಗಳ ಕಾಲ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ.
ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ 4 ಸಾವಿರ ಜನರು ಸಾವನ್ನಪ್ಪಿದ್ದು, 15,000 ಜನರು ಗಾಯಗೊಂಡಿದ್ದಾರೆ. 10 ನಗರಗಳಲಿ 1700ಕ್ಕೂ ಹೆಚ್ಚು ಕಟ್ಟಡಗಳು ನಾಶವಾಗಿವೆ ಎಂದು ತಿಳಿದುಬಂದಿದೆ.
*ನರ್ಸಿಂಗ್, ಪ್ಯಾರಾಮೆಡಿಕಲ್ ನ 137 ವಿದಾರ್ಥಿಗಳು ಅಸ್ವಸ್ಥ; 12 ಜನರ ಸ್ಥಿತಿ ಗಂಭೀರ*
https://pragati.taskdun.com/mangalore137-nursing-studentsill/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ