Belagavi NewsBelgaum NewsCrimePolitics

*ಮಹಾತ್ಮಾಗಾಂಧಿ ಪುತ್ಥಳಿಗೆ ಟೋಪಿ ಹಾಕಿದ್ದ ಇಬ್ಬರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರಿಗೆ ಅವಮಾನ ಮಾಡಲಾಗಿದ್ದು, ಗಾಂಧೀಜಿಗೆ ಸಾಂತ ಕ್ಲಾಸ್ ಟೋಪಿ ಹಾಕಲಾಗಿದೆ.

ಸಾಂತ ಕ್ಲಾಸ್ ಟೋಪಿ ಹಾಕಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕ್ಯಾಂಪ್ ಪ್ರದೇಶದ ಬೋಸ್ ಲೈನಿನ ಪಿಲಿಪ್ ಸಿಮೋನ್ ಸಪ್ಪರಪು (25), ಹಿಂದವಾಡಿಯ ಆದರ್ಶ ನಗರದ ಆದಿತ್ಯ ನವಜೀತ್ ಹೆಡಾ (25) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.

ಇಬ್ಬರು ಕಿಡಿಗೇಡಿಗಳು ಬೆಳಗಾವಿಯ ಹಿಂಡಲಗಾ ರಸ್ತೆಯ ಕ್ಯಾಂಪ್ ಬಳಿಯಿರುವ ಗಾಂಧಿ ಪ್ರತಿಮೆಗೆ ಅವಮಾನ ಮಾಡಿದ್ದರು. ಕಿಡಗೇಡಿಗಳು ಪ್ರತಿಮೆಯ ತಲೆ ಮೇಲೆ ಹಾಗೂ ಕೈ ಮೇಲೆ ಟೋಪಿ ಹಾಕಿ ಫೋಟೋ ತೆಗೆದು ಹಂಚಿಕೊಂಡಿದ್ದರು.

ಕಿಡಿಗೇಡಿಗಳ ಕೃತ್ಯಕ್ಕ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು.ಇದೀಗ ಅಂತಿಮವಾಗಿ ಕಿಡಿಗೇಡಿಗಳನ್ನು ಸೆರೆಹಿಡಿಯಲಾಗಿದೆ. ಅವಮಾನ ಮಾಡುವ ಸಲುವಾಗಿಯೇ ಇಬ್ಬರು ಕೃತ್ಯವೆಸಗಿದ್ದರು ಎನ್ನಲಾಗಿದ್ದು, ವಿಚಾರಣೆ ವೇಳೆ ಬಂಧಿತರು ತಪ್ಪೋಪ್ಪಿಕೊಂಡಿದ್ದಾರೆ.

Home add -Advt

Related Articles

Back to top button