Latest

*ಕಾರಿನೊಳಗೆ ಲಾಕ್ ಮಾಡಿಕೊಂಡ ಪುಟಾಣಿಗಳು ಉಸಿರುಗಟ್ಟಿ ಸಾವು*

ಪ್ರಗತಿವಾಹಿನಿ ಸುದ್ದಿ: ಸುಮಾರು ಒಂದು ಗಂಟೆಗಳ ಕಾಲ ಪುಟ್ಟ ಪುಟಾಣಿಗಳಿಬ್ಬರು ಕಾರಿನೊಳಗೆ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ದಮರಗಿರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮೃತ ಸಹೋದರಿಯರನ್ನು ತನು ಶ್ರೀ (4) ಮತ್ತು ಅಭಿನೇತ್ರಿ (5) ಎಂದು ಗುರುತಿಸಲಾಗಿದೆ. ತಕ್ಷಣ ಪೋಷಕರು ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಇಬ್ಬರೂ ಮಕ್ಕಳು ಮೃತಪಟ್ಟಿದ್ದಾಗಿ ಘೋಷಿಸಿದ್ದಾರೆ.

ಸುಮಾರು ಒಂದು ಗಂಟೆಯವರೆಗೆ ಬಾಲಕಿಯರು ಕಾರಿನೊಳಗೆ ಲಾಕ್ ಆಗಿದ್ದರು ಎನ್ನಲಾಗಿದ್ದು, ಇಬ್ಬರು ಕೂಡಾ ಉಸಿರುಗಟ್ಟಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಪೊಷಕರು ಮಕ್ಕಳನ್ನು ಕಾರಿನೊಳಗೆ ಕಂಡಾಗ ಆಗಾಗಲೇ ಅವರಿಬ್ಬರೂ ಪ್ರಜ್ಞಾಹೀನರಾಗಿದ್ದರು.

Home add -Advt

ಬಾಲಕಿಯರ ಪೋಷಕರು ಮನೆಯಲ್ಲಿ ಸಂಬಂಧಿಕರ ವಿವಾಹದ ಬಗ್ಗೆ ಚರ್ಚಿಸಲು ತಮ್ಮ ಅಜ್ಜಿಯ ಮನೆಗೆ ಬಂದಿದ್ದರು. ಈ ವೇಳೆ ಬಾಲಕಿಯರು ಮನೆಯಿಂದ ಹೊರ ಬಂದು ಕಾರಿನ ಬಾಗಿಲು ತೆರೆದು ವಾಹನದೊಳಗೆ ಕುಳಿತು ಲಾಕ್ ಮಾಡಿಕೊಂಡಿದ್ದಾರೆ. ಈ ವೇಳೆ ಬಾಲಕಿರಮಯರನ್ನು ಯಾರು ಕೂಡಾ ಗಮನಿಸಿಲ್ಲ ಎಂದು ತಿಳಿದು ಬಂದಿದೆ. 

Related Articles

Back to top button