Belagavi NewsBelgaum NewsKarnataka News

*ಮನನೊಂದು ಆತ್ಮಹತ್ಯೆಗೆ ಶರಣಾದ ಇಬ್ಬರು ರೈತರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಸಕಾಲಕ್ಕೆ ಸಾಲ ಮರು ಪಾವತಿ ಮಾಡದಿದ್ದಕ್ಕೆ ಮನನೊಂದು ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರು ಘಟನೆ ನಡೆದಿದೆ.

ಪಟ್ಟಿಹಾಳ ಕೆ.ಎಸ್.ಗ್ರಾಮದ ರೈತ ನಾಗಪ್ಪಾ ಅಜ್ಜಪ್ಪಾ ಸಂಕದಾಳ (60) ನೇಣಿಗೆ ಶರಣಾಗಿದ್ದಾರೆ.

ಖಾಸಗಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹಾಗೂ ಕೃಷಿ ಕೆಲಸಕ್ಕಾಗಿ ಒಟ್ಟು 5 ಲಕ್ಷ ರೂ.ಸಾಲ ಮಾಡಿದ್ದರೆಂದು ಪೊಲೀಸ್ರು ತಿಳಿಸಿದ್ದಾರೆ. ಕೆಲ ವ್ಯಕ್ತಿಗಳ ಹತ್ತಿರ ಕೈಗಡ ಸಾಲವನ್ನು ಮಾಡಿದ್ದರೆಂದು ಗೊತ್ತಾಗಿದೆ. ಸಕಾಲಕ್ಕೆ ಸಾಲ ಮರು ಪಾವತಿ ಮಾಡದಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಲೂಕಿನ ಬೈಲವಾಡ ಗ್ರಾಮದ ಇನ್ನೋರ್ವ ರೈತ ಯಲ್ಲನಗೌಡ ರಾಮನಗೌಡ ಗಿರೆಪ್ಪಗೌಡರ(53) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಿಕೆಪಿಎಸ್‌ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ ಕೃಷಿ ಕೆಲಸಕ್ಕಾಗಿ ಒಟ್ಟು ರೂ.4.50 ಲಕ್ಷ ಸಾಲ ಮಾಡಿದ್ದರು. ಸಕಾಲಕ್ಕೆ ಮರು ಪಾವತಿ ಮಾಡದಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವೆರೆಡು ಪ್ರಕರಣಗಳು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button