ಪ್ರಗತಿವಾಹಿನಿ ಸುದ್ದಿ; ಮಂಗಳೂರು: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಚುನಾವಣ ಅಕಣ ರಂಗೇರಿದೆ. ಹಿರಿಯ ನಾಯಕರಿಗೆ ಬಿಜೆಪಿ ಟಿಕೆಟ್ ನೀಡದ ವಿಚಾರವಾಗಿ ಮಾತನಾಡಿರುವ ಪರಿಷತ್ ಉಪನಾಅಕ ಯು.ಟಿ.ಖಾದರ್, ಹಿಂದೆಲ್ಲ ಬಿಜೆಪಿಯಲ್ಲಿ ಮೂರು ಬಾಗಿಲಿತ್ತು, ಈಗ 25 ಬಾಗಿಲುಗಳಾಗಿವೆ ಎಂದು ಟಾಂಗ್ ನೀಡಿದರು.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯು.ಟಿ.ಖಾದರ್, ಈಬಾರಿ ಟಿಕೆಟ್ ಘೋಷಣೆಯಲ್ಲಿಯೇ ಎಲ್ಲವೂ ಗೊತ್ತಾಗುತ್ತದೆ. ಯಾರೆಲ್ಲ ಮುಖ್ಯಮಂತ್ರಿ ರೇಸ್ ನಲ್ಲಿದ್ದರು, ಅವರೆಲ್ಲರಿಗೂ ಟೆಕೆಟ್ ಸಿಗದಂತೆ ಪ್ರಹ್ಲಾದ್ ಜೋಶಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಯಾರೂ ಮುಖ್ಯಮಂತ್ರಿ ರೇಸ್ ಗೆ ಬರದಂತೆ ಮಾಡಿದ್ದಾರೆ ಎಂದು ಹೇಳುವ ಮೂಲಕ ಕೆ.ಎಸ್.ಈಸ್ವರಪ್ಪ, ಜಗದೀಶ್ ಶೆಟ್ಟರ್ ಸೇರಿ ಬಿಜೆಪಿ ಹಿರಿಯ ನಾಯಕರಿಗೆ ಟಿಕೆಟ್ ಕೈತಪ್ಪಲು ಜೋಶಿ ಕಾರಣ ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ