Latest

ಪತ್ನಿಯ ಗುಪ್ತಾಂಗವನ್ನೇ ಅಲ್ಯೂಮಿನಿಯಂ ದಾರದಿಂದ ಹೊಲಿದ ಪತಿ

ಪ್ರಗತಿವಾಹಿನಿ ಸುದ್ದಿ; ಲಕ್ನೌ: ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಪತಿ ಮಹಾಶಯನೊಬ್ಬ ಆಕೆಯ ಗುಪ್ತಾಂಗವನ್ನೇ ಅಲ್ಯೂಮಿನಿಯಂ ದಾರದಿಂದ ಹೊಲಿದ ಆಘಾತಕಾರಿ ಘಟನೆ ಉತ್ತರಪ್ರದೇಶದ ರಾಯಪುರದಲ್ಲಿ ಬೆಳಕಿಗೆ ಬಂದಿದೆ.

ಎರಡು ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದ ಆರೋಪಿ ಪತಿ ಚಾಲಕನಾಗಿ ಕೆಲಸಮಾಡುತ್ತಿದ್ದ. ತನ್ನ ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಅನುಮಾನಗೊಂಡು ಸದಾ ಕಾಲ ಆಕೆಯೊಂದಿಗೆ ಜಗಳವಾಡುವುದು, ದೈಹಿಕವಾಗಿ ಹಿಂಸೆ ನೀಡುವುದು ಮಾಡುತ್ತಿದ್ದ. ಅನುಮಾನದಿಂದ ಫೆಡಲಿಟಿ ಟೆಸ್ಟ್ ಮಾಡಿಸುವಂತೆಯೂ ಕೇಳಿದ್ದಾನೆ. ಇದಕ್ಕೂ ಪತ್ನಿ ಒಪ್ಪಿದ್ದಾಳೆ. ಆದರೂ ಸಮಾಧಾನವಗದ ಪತಿ ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಪತಿ ಮಹಾಶಯ ಹೆಂಡತಿಯ ಕೈಕಾಲು ಕಟ್ಟಿಹಾಕಿ, ಬಾಯಿಗೆ ಬಟ್ಟೆ ತುರುಕಿ ಆಕೆಯ ಗುಪ್ತಾಂಗವನ್ನು ಅಲ್ಯುಮಿನಿಯಂ ದಾರದಿಂದ ಹೊಲಿದಿದ್ದಾನೆ.

Home add -Advt

ತೀವ್ರವಾದ ರಕ್ತಶ್ರಾವವಾಗುತ್ತಿದಂತೆ ಭಯಗೊಂಡ ಪಾಪಿ ಪತಿ, ಪತ್ನಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ನೋವಿಂದ ನರಳಾಡುತ್ತಿದ್ದ ಮಹಿಳೆ ಪ್ರಾಣ ಉಳಿಸಿಕೊಳ್ಳಲು ಕಷ್ಟಪಟ್ಟು ಪೋಷಕರಿಗೆ ಕರೆ ಮಾಡಿದ್ದಾಳೆ. ತಕ್ಷಣ ಪೋಷಕರು ಸ್ಥಳಕ್ಕೆ ಆಗಮಿಸಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪರಾರಿಯಾಗಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

Related Articles

Back to top button