Latest

ಉಕ್ರೇನ್-ರಷ್ಯಾ ಮುಂದುವರೆದ ಯುದ್ಧ; ಯಾವ ಸೇನೆಗೆ ಎಷ್ಟು ನಷ್ಟ? ಸಂಪೂರ್ಣ ಮಾಹಿತಿ

ಪ್ರಗತಿವಾಹಿನಿ ಸುದ್ದಿ; ಕೀವ್: ಉಕ್ರೇನ್ ಮೇಲೆ ರಷ್ಯಾ ತನ್ನ ಭೀಕರ ದಾಳಿ ಮುಂದುವರೆಸಿದೆ. ಇಡೀ ಕ್ರೇನ್ ನನ್ನು ತನ್ನ ತೆಕ್ಕೆಗೆ ಪಡೆಯಲು ರಶ್ಯಾ ಸೇನೆ ಮುಂದಾಗಿದೆ. ರಷ್ಯಾ ದಾಳಿಗೆ ಉಕ್ರೇನ್ ಕೂಡ ಪ್ರಬಲ ಪ್ರತಿದಾಳಿ ನಡೆಸಿದ್ದು, ಈವರೆಗೆ ರಷ್ಯಾದ 10,000 ಸೈನಿಕರನ್ನು ಹತ್ಯೆ ಮಾಡಿರುವುದಾಗಿ ತಿಳಿಸಿದೆ.

ಉಕ್ರೇನ್ ಮೇಲಿನ ರಷ್ಯಾ ದಾಳಿ 11ನೇ ದಿನಕ್ಕೆ ಕಾಲಿಟ್ಟಿದೆ. ಉಭಯ ದೇಶಗಳ ಸೇನೆಯಲ್ಲಿ ಲೆಕ್ಕವಿಲ್ಲದಷ್ಟು ಸಾವು-ನೋವು ಸಂಭವಿಸಿದೆ. ರಷ್ಯಾ ದಾಳಿಗೆ ಉಕ್ರೇನ್ ಸಂಪೂರ್ಣ ನಲುಗಿದ್ದು, 15 ಲಕ್ಷ ನಾಗರಿಕರು ನಿರಾಶ್ರಿತರಾಗಿದ್ದಾರೆ.

ಉಕ್ರೇನ್‌ನ 2,100 ಸೇನಾನೆಲೆಗಳನ್ನು ರಷ್ಯಾ ಧ್ವಂಸಗೊಳಿಸಿದೆ. ಈ ಪೈಕಿ 74 ಸಶಸ್ತ್ರ ಪಡೆಗಳ ಸಂವಹನ ಕೇಂದ್ರ, 68 ರಾಡಾರ್ ಕೇಂದ್ರಗಳು, 748 ಯುದ್ಧ ಟ್ಯಾಂಕರ್‌ಗಳು, 90 ಯುದ್ಧ ವಿಮಾನಗಳು, 532 ಸೇನಾ ವಾಹನಗಳು, 108 ಏರ್ ಡಿಫೆನ್ಸ್ ಮಷೀನ್​ಗಳು ನಾಶಗೊಂಡಿವೆ ಎಂದು ರಷ್ಯಾ ಮಾಹಿತಿ ನೀಡಿದೆ. ಈಗಾಗಲೇ ಚೆರ್ನೊಬಿಲ್ ಹಾಗೂ ಝೆಕೊವಿಜಿಯಾ ಎರಡು ಅಣು ವಿದ್ಯುತ್ ಸ್ಥಾವರಗಳನ್ನು ರಷ್ಯಾ ವಶಕ್ಕೆ ಪಡೆದಿದೆ.

ರಷ್ಯಾ ಮಾಹಿತಿ ಬೆನ್ನಲ್ಲೇ ಉಕ್ರೇನ್, ಈವರೆಗೆಗಿನ ಯುದ್ಧದಲ್ಲಿ ರಷ್ಯಾದ 10,000 ಸೈನಿಕರನ್ನು ಹೊಡೆದುರುಸಿರುವುದಾಗಿ ಉಕ್ರೇನ್ ತಿಳಿಸಿದೆ. ರಷ್ಯಾದ 269 ಯುದ್ಧ ಟ್ಯಾಂಕರ್, 945 ಶಸ್ತ್ರಸಜ್ಜಿತ ಯುದ್ಧ ವಾಹನ, 105 ಆರ್ಟಲರಿ ಸಿಸ್ಟಮ್, 50 ಎಂಎಲ್ ಆರ್, 19 ಏರ್ ಡಿಫೆನ್ಸ್, 30 ಯುದ್ಧ ವಿಮಾನ, 40 ಹೆಲಿಕಾಪ್ಟರ್, 409 ಯುನಿಟ್ಸ್ ಆಫ್ ಮೋಟರ್ ವೆಹಿಕಲ್, 60 ಆಯಿಲ್ ಟ್ಯಾಂಕ್ ಗಳನ್ನು ಧ್ವಂಸ ಮಾಡಿರುವುದಾಗಿ ಉಕ್ರೇನ್ ಸರ್ಕಾರ ಮಾಹಿತಿ ನೀಡಿದೆ.
ಮತ್ತೆ 3 ನಗರಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button