Latest

ನನ್ನ ಹತ್ಯೆಗೆ ರಷ್ಯಾ ಆದೇಶ ನೀಡಿದೆ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಆರೋಪ

ಪ್ರಗತಿವಾಹಿನಿ ಸುದ್ದಿ; ಕೀವ್: ಉಕ್ರೇನ್ ಮೇಲೆ ಐದನೇ ದಿನವೂ ದಾಳಿ ಮುಂದುವರೆಸಿರುವ ರಷ್ಯಾ ಸೇನೆ, ಈಗಾಗಲೇ ಉಕ್ರೇನ್ ನ ಹಲವು ಪ್ರದೇಶಗಳನ್ನು ವಶಕ್ಕೆ ಪಡೆದಿದೆ. ಕೀವ್, ಖಾರ್ಕೀವ್ ನಲ್ಲಿ ಮತ್ತಷ್ಟು ದಾಳಿಗಳನ್ನು ತೀವ್ರಗೊಳಿಸಿದೆ. ಈ ನಡುವೆ ರಷ್ಯಾ ತನ್ನನ್ನು ಹತ್ಯೆಗೈಯಲ್ಲು ಮುಂದಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ.

ನನ್ನ ಹತ್ಯೆಗೆ ರಷ್ಯಾ ಅಧ್ಯಕ್ಷ ಪುಟೀನ್ ಆದೇಶ ನೀಡಿದ್ದಾರೆ. ಕೀವ್ ನಲ್ಲಿ ರಷ್ಯಾದ 400 ಸೈನಿಕರು ನನ್ನ ಹುಡುಕಾಟ ನಡೆಸಿದ್ದಾರೆ. ನನ್ನನ್ನು ಹತ್ಯೆ ಮಾಡುವುದು ಅವರ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

Home add -Advt

ಈ ನಡುವೆ ರಾಷ್ಯಾ ಜತೆ ಉಕ್ರೇನ್ ಮಾತುಕತೆಗೆ ಸಿದ್ಧವಿದೆ ಆದರೆ ಶಸ್ತ್ರಾಸ್ತ್ರ ತ್ಯಜಿಸುವುದಿಲ್ಲ ಎಂದು ಹೇಳಿದೆ. ಬೆಲಾರಸ್ ಗೆ ಮಾತುಕತೆಗೆ ಬಂದರೆ ಉಕ್ರೇನ್ ಅಧ್ಯಕ್ಷರಿಗೆ ಭದ್ರತಾ ವ್ಯವಸ್ಥೆ ಮಾಡುವುದಾಗಿ ಬೆಲಾರಸ್ ತಿಳಿಸಿದೆ. ಇಂದು ರಷ್ಯಾ ಹಾಗೂ ಉಕ್ರೇನ್ ಮಾತುಕತೆ ನಡೆಯುವ ಸಾಧ್ಯತೆ ಇದ್ದು, ಯುದ್ಧ ಕೊನೆಯಾಗಲಿದೆಯೇ ಕಾದುನೋಡಬೇಕಿದೆ.
ಸಿಡಿದೆದ್ದ ಉಕ್ರೇನ್ ಮಾಡೆಲ್; ಬಂದೂಕು ಹಿಡಿದ ಮಿಸ್ ಗ್ರ್ಯಾಂಡ್ ಇಂಟರ್ ನ್ಯಾಷನಲ್

Related Articles

Back to top button