
ಪ್ರಗತಿವಾಹಿನಿ ಸುದ್ದಿ: ಋತುಚಕ್ರದ ವೇಳೆ ಹೊಟ್ಟೆ ನೊವು ತಾಳಲಾರದೆ ಯುವತಿ ನೇಣಿಗೆ ಶರಣಾದ ಘಟನೆ ತುಮಕೂರಿನಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವತಿಯನ್ನು ಕಲಬುರಗಿ ಮೂಲದ ಕೀರ್ತನಾ (19) ಎಂದು ಗುರುತಿಸಲಾಗಿದೆ. ಈಕೆ ಗುಲ್ಬರ್ಗದಿಂದ ಕೆಲಸ ಅರಸಿ ತುಮಕೂರಿನ ಬ್ಯಾತ ಗ್ರಾಮದಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ಬಂದಿದ್ದಳು. ಆದ್ರೆ ಇನ್ನೂ ಕೆಲಸ ಸಿಗದ ಕಾರಣ ಚಿಕ್ಕಪ್ಪನ ಮನೆಯಲ್ಲಿಯೇ ನೆಲೆಸಿದ್ದಳು. ಕೀರ್ತನಾ, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮುಟ್ಟಿನ ಹೊಟ್ಟೆ ನೋವನ್ನು ಸಹಿಸಲಾರದೆ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದ್ದು ಈ ಸಂಬಂಧ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



