Latest

ಮುಖ್ಯಮಂತ್ರಿ ಭದ್ರತಾ ಪೊಲೀಸ್ ಅಧಿಕಾರಿ ಆಕಸ್ಮಿಕ ಗುಂಡಿಗೆ ಬಲಿ

ಪ್ರಗತಿವಾಹಿನಿ ಸುದ್ದಿ, ಲಕ್ನೋ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಭದ್ರತೆಯಲ್ಲಿ ನಿಯೋಜಿತರಾಗಿದ್ದ ಪೊಲೀಸ್ ಅಧಿಕಾರಿಯೊಬ್ಬರು ಆಕಸ್ಮಿಕವಾಗಿ ಸರ್ವೀಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ.

ಸಂದೀಪ್ ಯಾದವ್ ಮೃತಪಟ್ಟ ಅಧಿಕಾರಿ. “ಯಾದವ್ ಅವರು ತಮ್ಮ ಮನೆಯಲ್ಲಿ ರಿವಾಲ್ವರ್ ಸ್ವಚ್ಛಗೊಳಿಸುತ್ತಿದ್ದರು. ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಹಾರಿತು” ಎಂದು ಬಾರಾಬಂಕಿ ಹೆಚ್ಚುವರಿ ಎಸ್ಪಿ ಅಶುತೋಷ್ ಮಿಶ್ರಾ ಹೇಳಿದ್ದಾರೆ. ಯಾದವ್ ಶನಿವಾರ ಕರ್ತವ್ಯಕ್ಕೆ ಹಾಜರಾಗಬೇಕಿತ್ತು.

ಭದ್ರತಾ ಅಧಿಕಾರಿಯ ಸಾವಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ತೀವ್ರ ಖೇದ ವ್ಯಕ್ತಪಡಿಸಿದ್ದಾರೆ. ಈ ಕುರಿತು ತನಿಖೆ ಮುಂದುವರಿದಿದೆ.

*ಸಿದ್ದರಾಮಯ್ಯನವರಿಗೆ ಕಟುಸತ್ಯ ಎದುರಿಸಬೇಕಾದ ಕಾಲ ಬಂದಿದೆ; ಸಿಎಂ ಬೊಮ್ಮಾಯಿ ತೀಕ್ಷ್ಣ ಪ್ರತಿಕ್ರಿಯೆ*

https://pragati.taskdun.com/cm-basavaraj-bommaireactionsiddaramaiaharkavati-rydoo-case/

ನಿಲ್ಲದ ರಷ್ಯಾ- ಉಕ್ರೇನ್ ಯುದ್ಧ ತಂತ್ರ; ಇನ್ನೊಂದೆಡೆ ನಾನಾ ರಾಷ್ಟ್ರಗಳಿಂದ ಶಾಂತಿಮಂತ್ರ

https://pragati.taskdun.com/unstoppable-russia-ukraine-war-strategy-on-the-other-hand-shanti-mantra-from-various-countries/

*ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಸೊಸೆ ಸೇರಿ ಇಬ್ಬರ ಬಂಧನ*

https://pragati.taskdun.com/bhatkalauttara-kannadamurder-casetwo-arrested/

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button