National

*ಪತ್ನಿಯ ಗುಪ್ತಾಂಗಕ್ಕೆ ಲಟ್ಟಣಿಗೆ ತುರುಕಿ ವಿಕೃತಿ ಮೆರೆದು ಕೊಲೆಗೈದ ಪತಿ*

ಪ್ರಗತಿವಾಹಿನಿ ಸುದ್ದಿ: ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಕುಡುಕ ಪತಿ ಮಹಾಶಯ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದಿದೆ.

ಸುರ್ಜಿತ್ ಪತ್ನಿಯನ್ನೇ ಕೊಂದ ಪತಿ. ರೇಷ್ಮಾ ಪತಿಯಿಂದ ಭೀಕರವಾಗಿ ಕೊಲೆಯಾದ ಪತ್ನಿ. ಕುಡಿತದ ದಾಸನಾಗಿದ್ದ ಸುರ್ಜಿತ್, ಪತ್ನಿಗೆ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ. ಇದೇ ಕಾರಣಕ್ಕೆ ಪತಿ-ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತು. ಪತಿಯ ಕಿರುಕುಳ ವಿಕೃತಿಗೆ ತಲುಪಿದ್ದು, ಚಿತ್ರಹಿಂಸೆ ನೀಡಿ ಕೊಲೆಗೈದಿದ್ದಾನೆ.

ಮರಣೋತ್ತರ ಪರೀಕ್ಷೆ ವರದಿ ಬೆಚ್ಚಿಬೀಳಿಸುವಂತಿದೆ. ಪತ್ನಿಯ ಕೈ-ಕಾಲು ಕಟ್ಟಿಹಾಕಿ ವಿಧವಿಧವಾಗಿ ಹಿಂಸಿಸಿರುವ ಸುರ್ಜಿತ್, ಪತ್ನಿಯ ಗುಪ್ತಾಂಗಕ್ಕೆ ಲಟ್ಟಣಿಗೆಯನ್ನು ತುರುಕಿ ವಿಕೃತ ಅಟ್ಟಹಾಸ ಮೆರೆದಿದ್ದಾನೆ. ಮೃತ ರೇಷ್ಮಾಳ ಮರಣೋತ್ತರ ಪರೀಕ್ಷೆ ವೇಳೆ ದೇಹದ ತುಂಬೆಲ್ಲ ಗಾಯಗಳಾಗಿರುವುದು, ಆಕೆಯ ಮರ್ಮಾಂಗದಲ್ಲಿ ವಸ್ತುವೊಂದು ಇರುವುದು ಪತ್ತೆಯಾಗಿದೆ. ಹೊರತೆಗೆದಾಗ ಅದು ಚಪಾತಿ ಲಟ್ಟಿಸುವ ಲಟ್ಟಣಿಗೆ ಎಂಬುದು ತಿಳಿದುಬಂದಿದೆ. ಮಹಿಳೆಯ ಕರುಳಿನವರೆಗೂ ಲಟ್ಟಣಿಗೆ ಹೊಕ್ಕಿರುವ ಕಾರಣ ಚಿತ್ರಹಿಂಸೆಗೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬದಿದೆ.

ಚಿತ್ರಹಿಂಸೆ ನೀಡಿ ಪತ್ನಿಯನ್ನು ಕೊಂದ ಪತಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

Home add -Advt


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button