Latest

ಕೊರೊನಾ ಸೋಂಕಿನಿಂದ ಗುಣಮುಖರಾದ 20 ಜನ ಡಿಸ್ಚಾರ್ಜ್

ಪ್ರಗತಿವಾಹಿನಿ ಸುದ್ದಿ; ಕಾರವಾರ: ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಯಾರೂ ಭಯಪಡುವ ಅಗತ್ಯವಿಲ್ಲ. ಯಾರಿಗೇ ಸೋಂಕಿನ ಲಕ್ಷಣ ಕಂಡುಬಂದಲ್ಲಿ ತಕ್ಷಣ ತಪಾಸಣೆ ಮಾಡಿಸಿಕೊಳ್ಳಿ. ಸೂಕ್ತ ಚಿಕಿತ್ಸೆಯಿಂದ ಸೋಂಕಿನಿಂದ ಗುಣಮುಖರಾಗಬಹುದು. ಇಂದು 20 ಜನರು ಮಹಾಮಾರಿ ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗುತ್ತಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ತಿಳಿಸಿದ್ದಾರೆ.

ಇಂದು ಕಾರವಾರದ ಮೆಡಿಕಲ್ ಕಾಲೇಜನಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾದ 20 ಜನರನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ಮಾತನಾಡಿದ ಅವರು, ಕೊರೊನಾ ಸೋಂಕಿನ ಬಗ್ಗೆ ನಮ್ಮಲ್ಲಿ ಜಾಗೃತಿ ಮೂಡಿಸುವುದು ಅತೀ ಮುಖ್ಯವಾಗಿದೆ. ಸೊಂಕು ಸಮುದಾಯಕ್ಕೆ ಹರಡದಂತೆ ನೋಡಬೇಕು. ಆದಷ್ಟು ಅಂತರ ಕಾಯ್ದುಳ್ಳಬೇಕು ಎಂದರು.

Home add -Advt

ದಯವಿಟ್ಟು ಜನರಲ್ಲಿ ಭಯಹುಟ್ಟಿಸುವ ಕೆಲಸ‌ ಮಾಡಬೇಡಿ, ಕ್ವಾರಂಟೈನ್ ಗೆ ಕರೆದುಕೊಂಡು ಹೋದರೂ ಸಹ ಅವರಿಗೆ ಸೋಂಕು ಬಂದೆ ಬಿಟ್ಟಿದೆ ಎನ್ನುವ ರೀತಿಯಲ್ಲಿ ವರ್ತಿಸುವುದನ್ನ ಬಿಡಬೇಕು. ಅವರಲ್ಲಿ ವಿಶ್ವಾಸ ಮೂಡಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

ಈ‌ ಸಂದರ್ಭದಲ್ಲಿ ಜಿಪಂ ಸಿಇಒ ಎಂ. ರೋಶನ್ ಹಾಗೂ ಎಸ್.ಪಿ ಶಿವಪ್ರಕಾಶ್ ದೇವರಾಜು ಇದ್ದರು

Related Articles

Back to top button