ಪ್ರಗತಿವಾಹಿನಿ ಸುದ್ದಿ; ಲಖನೌ: ಸಹೋದರನೊಂದಿಗೆ ಟ್ಯೂಷನ್ ಕ್ಲಾಸ್ ಗೆ ತೆರಳಿದ್ದ 5 ವರ್ಷದ ಬಾಲಕಿ ಮೇಲೆ 13 ವರ್ಷದ ಬಾಲಕನೊಬ್ಬ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ಬೆಳಕಿಗೆ ಬಂದಿದೆ.
ಆರೋಪಿ ಬಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ಬಾಲಾಪರಾಧ ನ್ಯಾಯಾಲಯದ ಎದುರು ಹಾಜರು ಪಡಿಸಿದ್ದು, ಸಧ್ಯ ಆತನನ್ನು ನೊಯ್ಡಾದ ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಲಾಗಿದೆ.
ಸಹೋದರನ ಜೊತೆ ಬಾಲಕಿ ಟ್ಯೂಷನ್ ಕ್ಲಾಸ್ ಗೆ ಟೀಚರ್ ಮನೆಗೆ ಹೋಗಿದ್ದಳು. ಆದರೆ ಅಲ್ಲಿ ಶಿಕ್ಷಕಿ ಇರಲಿಲ್ಲ. ಬದಲಿಗೆ ಶಿಕ್ಷಕಿಯ ಮಗ 13 ವರ್ಷದ ಬಾಲಕ ಇದ್ದ. ಕೆಲ ಸಮಯವಾದರೂ ಶಿಕ್ಷಕಿ ಮನೆಗೆ ಬಾರದಿದ್ದಾಗ ಬಾಲಕಿಯ ಅಣ್ಣ ತಾನು ಮನೆಗೆ ಹೋಗಿ ಬರುವುದಾಗಿ ಹೇಳಿದ್ದ. ಶಿಕ್ಷಕಿಯ ಮಗ, ತಾನು ಮತ್ತು ಬಾಲಕಿ ಆಟವಾಡುವುದಾಗಿ ಹೇಳಿದ್ದ ಇದರಿಂದ ಬಾಲಕಿಯ ಸಹೋದರ ಮಕ್ಕಳಿಬ್ಬರು ಆಟವಾಡುತ್ತಿದ್ದಾರೆ ಎಂದು ಸಹೋದರಿಯನ್ನು ಅಲ್ಲಿಯೇ ಬಿಟ್ಟು ಮನೆಗೆ ಬಂದಿದ್ದ. ಬಾಲಕಿಯ ಸಹೋದರ ಮನೆಯಿಂದ ತೆರಳುತ್ತಿದ್ದಂತೆ ಶಿಕ್ಷಕಿಯ ದುರಳ ಮಗ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಮನೆಗೆ ವಾಪಸ್ ಆದ ಬಾಲಕಿ ತನ್ನ ತಾಯಿಬಳಿ ಅಳುತ್ತಾ ಹೊಟ್ಟೆನೋವೆಂದು ಒದ್ದಾಡಿದ್ದಾಳೆ. ಮಗಳ ಸ್ಥಿತಿ ಕಂಡು ತಾಯಿ ವಿಚಾರಿಸಿದಾಗ ಶಾಕ್ ಆಗಿದ್ದಾಳೆ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ