Latest

ನಾಲ್ಕು ವರ್ಷಗಳ ಬಳಿಕ ತವರಿಗೆ ಚಿನ್ನಮ್ಮ; ಶಶಿಕಲಾ ಸ್ವಾಗತಕ್ಕೆ ಕಾಯುತ್ತಿರುವ ಅಭಿಮಾನಿಗಳು

ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಜೈಲಿನಿಂದ ಬಿಡುಗಡೆಯಾದ ವಿ.ಕೆ.ಶಶಿಕಲಾ ನಟರಾಜನ್ ನಾಲ್ಕು ವರ್ಷಗಳ ಬಳಿಕ ಇಂದು ತಮಿಳುನಾಡಿಗೆ ಎಂಟ್ರಿಕೊಡುತ್ತಿದ್ದು, ತಮಿಳುನಾಡು ರಾಜಕೀಯ ರಂಗದಲ್ಲಿ ಸಂಚಲನ ಮೂಡುವ ಸಾಧ್ಯತೆಯಿದೆ.

ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ತಮಿಳುನಾಡು ಮಾಜಿ ಸಿಎಂ ದಿ.ಜಯಲಲಿತಾ ಆಪ್ತೆ ಶಶಿಕಲಾ ಜ.27ರಂದು ಬಿಡುಗಡೆಯಾಗಿದ್ದರು. ಆದರೆ ಅವರಿಗೆ ಕೊರೊನಾ ಸೋಂಕು ತಗುಲಿದ ಕಾರಣಕ್ಕೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಶಶಿಕಲಾ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೋಡಗುರ್ಕಿಯಲ್ಲಿನ ರೆಸಾರ್ಟ್ ನಲ್ಲಿ ವಾಸವಾಗಿದ್ದರು.

ಇಂದು ಚಿನ್ನಮ್ಮ ಚೆನ್ನೈಗೆ ತೆರಳಲಿದ್ದು, ಈಗಾಗಾಲೇ ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿಯೇ ಹೊರಟಿರುವ ಶಶಿಕಲಾ ಜೊತೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಹಲವು ವಾಹನಗಳಲ್ಲಿ ತೆರಳಿದ್ದಾರೆ. ಇನ್ನು ಚಿನ್ನಮ್ಮನ ಸ್ವಾಗತಕ್ಕೆ ತಮಿಳುನಾಡಿನಲ್ಲಿ ಭರ್ಜರಿ ಸಿದ್ಧತೆ ನಡೆಸಲಾಗಿದ್ದು, ಚೆನ್ನೈನ ಜೂಜುವಾಡಿ ಚೆಕ್ ಪೋಸ್ಟ್ ಬಳಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿರುವ ಅಭಿಮಾನಿಗಳು ಪೂರ್ಣಕುಂಭ ಸ್ವಾಗತ, ಚಂಡೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸ್ವಾಗತಕ್ಕಾಗಿ ಕಾಯುತ್ತಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button