Latest

ಇತಿಮಿತಿಯಲ್ಲಿ ಮಾತನಾಡಬೇಕು: ಪ್ರೀತಂ ಗೌಡ ವಿರುದ್ಧ ಕಿಡಿ ಕಾರಿದ ಸಚಿವ ವಿ.ಸೋಮಣ್ಣ

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಶಾಸಕ ಪ್ರೀತಂ ಗೌಡ ಒಂದು ಬಾರಿ ಶಾಸಕನಾದ ಮಾತ್ರಕ್ಕೆ ದೇವರಲ್ಲ, ಇತಿಮಿತಿಯಲ್ಲಿ ಮಾತನಾಡಬೇಕು ಎಂದು ವಸತಿ ಸಚಿವ ವಿ.ಸೋಮಣ್ಣ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಸಚಿವರು, ಸಿಎಂ ಬೊಮ್ಮಾಯಿ ದೇವೇಗೌಡರ ಮನೆಗೆ ಭೇಟಿ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಬಿಜೆಪಿ ಶಾಸಕ ಪ್ರೀತಮ್ ಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಪ್ರೀತಂ ಗೌಡ ಇನ್ನೂ ಚಿಕ್ಕ ಹುಡುಗ. ದೇವೇಗೌಡರ ಕುಟುಂಬಕ್ಕೆ 50 ವರ್ಷ ರಾಜಕೀಯ ಇತಿಹಾಸವಿದೆ. ರಾಷ್ಟ್ರದ ಪ್ರಧಾನಿಯಾಗಿದ್ದವರು. ನಾನೂ ದೇವೇಗೌಡರ ಮನೆಗೆ ಹೋಗಿದ್ದೆ. ಪ್ರೀತಂ ಗೌಡ ಇಂತಹ ಮಾತುಗಳನ್ನು ಬಿಡಬೇಕು ಎಂದು ಸಲಹೆ ನೀಡಿದರು.

ನಾನು ಸಚಿವನಾಗಿದ್ದಾಗ ಪ್ರೀತಂ ಗೌಡ ಇನ್ನೂ ಹುಟ್ಟೇ ಇರಲಿಲ್ಲ, ಒಮ್ಮೆ ಎಂಎಲ್ ಎ ಆದ ಮಾತ್ರಕ್ಕೆ ದೇವರಾಗಿ ಬಿಡಲ್ಲ. ಇತಿಮಿತಿಯಲ್ಲಿ ಇರಬೇಕು ಎಂದು ಕಿಡಿಕಾರಿದರು.

Home add -Advt

ಬಿಜೆಪಿ ಮುಖಂಡ ಹಾಗೂ ಪತ್ನಿಯ ಬರ್ಬರ ಹತ್ಯೆ

Related Articles

Back to top button