Kannada NewsLatest

*ವೈಕುಂಠ ಏಕಾದಶಿ ಮಹತ್ವ*

ವೈಕುಂಠ ಏಕಾದಶಿ ಎಲ್ಲಾ 24 ಏಕಾದಶಿಗಳಲ್ಲಿ ವಿಶೇವಾಗಿದ್ದು, ಚಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದಲ್ಲಿ ಬರುವುದು. ಆ ದಿನ ಉಪವಾಸವಿದ್ದು ಜಾಗರಣೆ, ನಾಮಸ್ಮರಣೆ ಮುಂತಾದ ವ್ರತಾಚರಣೆ ಮಾಡುವ ಸಂಪ್ರದಾಯವಿದೆ. ಈ ದಿನದಂದು ವೈಕುಂಠ(ವಿಷ್ಣುಲೋಕ, ಸ್ವರ್ಗ)ದ ಬಾಗಿಲು ತೆರೆದಿರುವದರಿಂದ ಅಂದು ವಿಷ್ಣು /ವೆಂಕಟೇಶ್ವರನ ದರ್ಶನಕ್ಕೆ ಅತ್ಯಂತ ಮಹತ್ವವಿದೆ. ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯೂ ಇದೆ. ಅಂದು ಯಾರಾದರೂ ಸತ್ತ ಹೋದರೆ ನೇರವಾಗಿ ಸ್ವರ್ಗಕ್ಕೆ ಹೋಗುವರು ಎಂಬ ನಂಬಿಕೆ ಇದೆ. ಅಂದು ಪಂಢರಪುರ ಮತ್ತು ತಿರುಪತಿ ಮುಂತಾದ ಅನೇಕ ದೇವಸ್ಥಾನಗಳಿಗೆ ಭಕ್ತರು ಹೋಗುವುದು ಸರ್ವೇಸಾಮಾನ್ಯ.

‘ಶರೀರಮಾಧ್ಯಂ ಖಲು ಧರ್ಮಸಾಧನಂ’ ಯಾವುದೇ ಧಾರ್ಮಿಕ ಕೆಲಸಗಳನ್ನು ಮಾಡಬೇಕೇಂದರೆ ಶರೀರ ಮತ್ತು ಮಾನಸಿಕ ಆರೋಗ್ಯ ಬಹುಮುಖ್ಯ. ಆದ್ದರಿಂದ ವ್ರತದಲ್ಲಿ ಧ್ಯಾನ ಮತ್ತು ಉಪವಾಸ ಮಾಡಬೇಕು. ಅದರ ಜೊತೆಗೆ ಜಾಗರಣೆಯು ಅತಿಅವಶ್ಯಕ. ಇದರಿಂದ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಹಜವಾಗಿ ನಿಭಾಯಿಸಬುಹುದು.

ವೈಕುಂಠ ಏಕಾದಶಿಯ ಪೌರಾಣಿಕ ಕಥೆ : ನಂದಗೋಪನು ಶ್ರೀಕೃಷ್ಣನ ಸಾನಿಧ್ಯದಲ್ಲಿ ಏಕಾದಶಿಯ ಉಪವಾಸ ದ್ವಾದಶಿಯ ಪಾರಣೆಯನ್ನು ತಪ್ಪದೇ ಆಚರುಸುತ್ತಿದ್ದ. ಒಮ್ಮೆ ಏಕಾದಶಿಯ ವ್ರತ ಆಚರಿಸಿ, ಮರುದಿನ ದ್ವಾದಶಿಯು ಬಹುಸ್ವಲ್ಪ ಕಾಲ ಇದ್ದುದ್ದರಿಂದ ಬೆಳಗಿನ ಸಮಯದಲ್ಲಿ ಯಮುನಾನದಿಯಲ್ಲಿ ಸ್ನಾನಕ್ಕಿಳಿದ. ಅದು ರಾಕ್ಷಸರ ಸಂಚಾರದ ಕಾಲವಾದ್ದರಿಂದ ವರುಣದೇವನ ಸೇವಕ ನಂದಗೋಪನನ್ನು ವರುಣನ ಬಳಿಗೆ ಎಳೆದೊಯುತ್ತಾರೆ. ಇತ್ತ ನಂದನು ಎಷ್ಟು ಹೊತ್ತಾದರೂ ಸ್ನಾನಕ್ಕೆ ಹೋದವನು ಬಾರದಿರಲು ಗೋಪಾಲಕುಲದವರು ಬಲರಾಮಕೃಷ್ಣರಿಗೆ ಈ ಸುದ್ದಿ ಮುಟ್ಟಿಸುತ್ತಾರೆ. ಆಗ ಅವನನ್ನು ಕರೆತರಲು ವರುಣಲೋಕಕ್ಕೆ ಬರುತ್ತಾರೆ. ಆಗ ಶ್ರೀಕೃಷ್ಣನಿಗೆ ನಮಿಸಿ ವರುಣ ತನ್ನ ಸೇವಕನಿಂದಾದ ಅಪರಾಧ ಕ್ಷಮಿಸಬೇಕೆಂದು ಪ್ರಾರ್ಥಿಸುತ್ತಾನೆ. ಆಗ ಇಬ್ಬರು ಗೋಕುಲಕ್ಕೆ ವಾಪಸ್ಸು ಬರುತ್ತಾರೆ. ಗೋಪಾಲರಿಗೆಲ್ಲಾ ಕೃಷ್ಣ ಸಾಕ್ಷಾತ್ ಪರಮೇಶ್ವರ ಹೌದು ಅದರೇ ನಾವು ಅರಿಯಲಿಲ್ಲ, ಎಂದು ಪಷ್ಚಾತ್ತಾಪವಾಗುತ್ತದೆ. ಆಗ ಕೃಷ್ಣ ಎಲ್ಲರಿಗೂ ಯಮುನಾ ನದಿಯಲ್ಲಿದ್ದ ಬ್ರಹ್ಮಕಯಂಡವೆಂಬ ಮಡುವಿನಲ್ಲಿ ಮುಳುಗಿಬರುವಂತೆ ತಿಳಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button