ಚಿಕ್ಕಮುನವಳ್ಳಿ ಆರೂಢ ಮಠದಲ್ಲಿ ವೇದಾಂತ ಪರಿಷತ್ ಮತ್ತು ಜಾತ್ರಾ ಕಾರ್ಯಕ್ರಮಕ್ಕೆ ವಿವಿಧ ಶ್ರೀಗಳಿಂದ ಚಾಲನೆ
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲ್ಲೂಕಿನ ಚಿಕ್ಕಮುನವಳ್ಳಿ ಗ್ರಾಮದ ಆರೂಢ ಮಠದಲ್ಲಿ ಮಠದ ಪೀಠಾಧ್ಯಕ್ಷ ಶಿವಪುತ್ರ ಶ್ರೀಗಳ ಸಾನಿಧ್ಯದಲ್ಲಿ ಐದು ದಿನಗಳ ಕಾಲ ಜರುಗಲಿರುವ ಅಖಲ ಕರ್ನಾಟಕ ವೇದಾಂತ ಪರಿಷತ್ ಮತ್ತು ಶ್ರೀ ಮಠದ ವಾಷರ್ಿಕ ಜಾತ್ರಾ ಕಾರ್ಯಕ್ರಮಕ್ಕೆ ಕೋಳಿಗುಡ್ಡದ ಸ್ವರೂಪಾನಂದ ಶ್ರೀಗಳು, ಹೂಲಿಕಟ್ಟಿಯ ಲಿಂಗಾನಂದ ಪ್ರಭುಗಳು, ದೇವಲಾಪುರದ ಶಿವಾನಂದ ಸರಸ್ವತಿ ಶ್ರೀಗಳು ಹಾಗೂ ಇತರ ಧರ್ಮಗುರುಗಳು ವಿದ್ಯುಕ್ತವಾಗಿ ಚಾಲನೆ ನೀಡಿದರು.
ಮಠದ ಸಂಸ್ಥಾಪಕ ಬ್ರಹ್ಮಲೀನ ಶ್ರೀ ಸದಾಶಿವಾನಂದ ಶ್ರೀಗಳ 15ನೇ ಪುಣ್ಯಸ್ಮರಣೋತ್ಸವ ಮತ್ತು ಗ್ರಾಮದಲ್ಲಿ ಮಠ ಸ್ಥಾಪನೆಗೊಂಡು 45 ವರ್ಷಗಳು ಸಂಪನ್ನಗೊಂಡ ಹಿನ್ನೆಲೆಯಲ್ಲಿ ಮಠದಲ್ಲಿ ಪ್ರತಿನಿತ್ಯ ಅಖಿಲ ಕರ್ನಾಟಕ ವೇದಾಂತ ಪರಿಷತ್, ವಾರಕರಿ ಸಂತರ ಸಮಾವೇಶ, ವಿವಿಧ ಗೋಷ್ಠಿಗಳು, ಸತ್ಸಂಗ, ಭಕ್ತಿ ಸಂಗೀತ, ಧರ್ಮಸಭೆ, ಭಗವದ್ಗೀತೆ ಪಾರಾಯಣ, ಮಹಾರುದ್ರಾಭಿಷೇಕ, ಗಣಹೋಮ, ಮೃತ್ಯುಂಜಯ ಹೋಮ ಮತ್ತಿತರ ಧಾಮರ್ಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳಕರ, ಹಣ್ಣಿಕೇರಿಯ ಬಸವರಾಜ ಶಾಸ್ತ್ರಿಗಳು, ಬೇವಿನಕೊಪ್ಪದ ವಿಜಯಾನಂದ ಶ್ರೀಗಳು, ತೋಪಿನಕಟ್ಟಿ ಸಿದ್ಧಾಶ್ರಮದ ರಾಮದಾಸ ಮಹಾರಾಜರು, ಕಸಬಾ ನಂದಗಡದ ಮಾರುತಿ ಮಹಾರಾಜರು, ಎಂ.ಕೆ ಹುಬ್ಬಳ್ಳಿ ವಿಠ್ಠಲ ರುಕ್ಮಿಣಿ ಮಠದ ಜ್ಞಾನದೇವ ಮಹಾರಾಜರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದರು.
ಮಂಗಳವಾರ ಜರುಗಿದ ವೇದಾಂತ ಪರಿಷತ್ ಸಮಾರೋಪ ಸಮಾರಂಭದಲ್ಲಿ ಮಠದಿಂದ ಪ್ರತಿ ವರ್ಷ ನೀಡುವ “ಆರೂಢ ಶ್ರೀ” ಪ್ರಶಸ್ತಿಯನ್ನು ಹಿರಿಯ ರಂಗಭೂಮಿ ಕಲಾವಿದ, ರಂಗಾಯಣದ ನಿರ್ದೇಶಕ ರಾಜು ತಾಳಿಕೋಟಿ ಅವರಿಗೆ ನೀಡಿ ಗೌರವಿಸಲಾಯಿತು. ಸಂಜೆ ನಡೆದ ಸಿದ್ಧಾರೂಢರ ರಥೋತ್ಸವದಲ್ಲಿ ಮಠದ ಅಸಂಖ್ಯಾತ ಭಕ್ತರು ಭಾಗವಹಿಸಿದ್ದರು. ರಾತ್ರಿ ಮಠದಲ್ಲಿ ಜರುಗಿದ ಮಲೆನಾಡೋತ್ಸವ ಕಾರ್ಯಕ್ರಮದಲ್ಲಿ ಭಕ್ತಿ ಸಂಗೀತ, ರಸಮಂಜರಿ ಮತ್ತು ಸಾಂಸ್ಕೃತಿಕ ಸೌರಭ ಆಯೋಜಿಸಲಾಗಿತ್ತು. ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ಮಠದಿಂದ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಚಿಕ್ಕಮುನವಳ್ಳಿ ಹಾಗೂ ಅಕ್ಕಪಕ್ಕದ ಭಾಗದ ಮಠದ ಭಕ್ತರು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ