Kannada NewsKarnataka News

ಖಾನಾಪುರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವಾಸ್ತುಶಾಂತಿ ಮತ್ತು
ಗಣಹೋಮ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಆರೋಗ್ಯ
ಇಲಾಖೆಯಿಂದ ನಿರ್ಮಾಣಗೊಂಡಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನೂತನ
ಕಟ್ಟಡದ ವಾಸ್ತುಶಾಂತಿ ಮತ್ತು ಗಣಹೋಮ ಕಾರ್ಯಕ್ರಮ ಭಾನುವಾರ
ಶಾಸ್ತ್ರೋಕ್ತವಾಗಿ ಸಂಪನ್ನಗೊಂಡಿತು.
ವಾಸ್ತುಶಾಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕಿ ಡಾ.ಅಂಜಲಿ
ನಿಂಬಾಳಕರ, ಆಸ್ಪತ್ರೆಯ ಕಟ್ಟಡದ ಕೆಲಸ ಶೇ.೯೦ರಷ್ಟು ಪೂರ್ಣಗೊಂಡಿದೆ.
ಸರ್ಕಾರದಿಂದ ಈ ಆಸ್ಪತ್ರೆಗೆ ಹೊಸದಾಗಿ ವೈದ್ಯರು, ಸಿಬ್ಬಂದಿ ಮತ್ತು ತಂತ್ರಜ್ಞರ
ನೇಮಕವಾಗಿಬೇಕಿದೆ ಮತ್ತು ವೈದ್ಯಕೀಯ ಯಂತ್ರೋಪಕರಣಗಳು ಇನ್ನಷ್ಟೇ
ಬರಬೇಕಿದೆ. ಇವುಗಳಿಗಾಗಿ ಸರ್ಕಾರದ ಮಟ್ಟದಲ್ಲಿ ತಮ್ಮ ಪ್ರಯತ್ನ
ಮುಂದುವರೆದಿದ್ದು, ಒಂದು ತಿಂಗಳ ಅವಧಿಯಲ್ಲಿ ಈ ಆಸ್ಪತ್ರೆ ಸಾರ್ವಜನಿಕರ
ಸೇವೆಗೆ ಲಭ್ಯವಾಗುವ ನಿರೀಕ್ಷೆಯಿದೆ. ಭಾನುವಾರ ಚೈತ್ರಮಾಸದ
ಶುಕ್ಲಪಕ್ಷದ ಶುಭದಿನವಾಗಿದ್ದು, ವಾಸ್ತುಶಾಂತಿಗೆ ಸೂಕ್ತ ಮುಹೂರ್ತವಿರುವ
ಕಾರಣ ಆಸ್ಪತ್ರೆಯ ಗುತ್ತಿಗೆದಾರರು, ಅಭಿಯಂತರು, ವೈದ್ಯರು ಮತ್ತು
ಸಿಬ್ಬಂದಿ ಸೇರಿ ಆಸ್ಪತ್ರೆಯ ನೂತನ ಕಟ್ಟಡದ ವಾಸ್ತುಶಾಂತಿ ಮತ್ತು ಗಣಹೋಮ
ನೆರವೇರಿಸಿ ನೂತನ ಕಟ್ಟಡ ಎಲ್ಲರಿಗೂ ಶುಭ ತರಲಿ ಎಂದು ಹಾರೈಸಿದ್ದಾರೆ
ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಸಂಜೀವ ನಾಂದ್ರೆ, ಸ್ತ್ರೀರೋಗ
ತಜ್ಞ ಡಾ.ನಾರಾಯಣ ವಡ್ಡೀನ, ವೈದ್ಯರಾದ ಡಾ.ನಾಯ್ಕ, ಡಾ.ರವಿರಾಜ ಪೈ,
ಡಾ.ವಿನಾಯಕ ಕಿಣಗಿ, ತಾಲೂಕು ಆಸ್ಪತ್ರೆಯ ಶಿವಾನಂದ ಬುಡರಕಟ್ಟಿ, ವೀಣಾ ಕಟ್ಟಿ,
ಬೀರಪ್ಪ, ಬಸವರಾಜ ಸೇರಿದಂತೆ ಸಾರ್ವಜನಿಕ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ,
ಸಾರ್ವಜನಿಕರು ಭಾಗವಹಿಸಿದ್ದರು.

https://pragati.taskdun.com/adventure-sports-and-swimming-pool-launch-at-bhimgad-adventure-camp-premises/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button