Uncategorized

*ಇಲ್ಲೇ ಪಂಚೆ ಹಾಸಿಕೊಂಡು ಮಲಗುತ್ತೇವೆ; ಸದನದಲ್ಲಿ ಅಹೋರಾತ್ರಿ ಧರಣಿ ಎಚ್ಚರಿಕೆ ನೀಡಿದ ಹೆಚ್.ಡಿ.ರೇವಣ್ಣ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊಬ್ಬರಿಗೆ ಬೆಂಬಲ ಬೆಲೆ ಬಗ್ಗೆ ರಾಜ್ಯ ಸರ್ಕಾರ ತಕ್ಷಣ ನಿರ್ಧಾರ ಕೈಗೊಳ್ಳಬೇಕು ಎಂದು ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಒತ್ತಾಯಿಸಿದ್ದಾರೆ.

Home add -Advt

ವಿಧಾನಸಭೆ ಕಲಾಪದ ವೇಳೆ ನಿಯಮ 69ರಡಿ ಕೊಬ್ಬರಿಗೆ ಬೆಂಬಲ ಬೆಲೆ ವಿಚಾರ ಚರ್ಚೆ ನಡೆಯಿತು. ಈ ವೇಳೆ ಹೊಳೆನರಸಿಪುರ ಶಾಸಕ ಹೆಚ್.ಡಿ.ರೇವಣ್ಣ, ಕೊಬ್ಬರಿಗೆ ಬೆಂಬಲ ಬೆಲೆ ಬಗ್ಗೆ ಇಂದೇ ನಿರ್ಧಾರ ಮಾಡಿ. ಇಲ್ಲವಾದರೇ ಸದನದಲ್ಲೇ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಬೆಂಬಲ ಬೆಲೆ ಬಗ್ಗೆ ಈಗಲೇ ಸರ್ಕಾರ ನಿರ್ಣಯ ಮಾಡಬೇಕು. ಇಲ್ಲವಾದರೆ ಇಲ್ಲೇ ಪಂಚೆ ಹಾಸಿಕೊಂಡು ಮಲಗುತ್ತೇವೆ. ಧರಣಿ ಮಾಡುತ್ತೇವೆ. ಸ್ಪೀಕರ್ ಯು.ಟಿ.ಖಾದರ್ ಅವರು ರಾತ್ರಿ ಊಟ ಹಾಕಿಸುತ್ತಾರೆ ಎಂದು ಹೇಳಿದರು.


Related Articles

Back to top button