ಪ್ರಗತಿವಾಹಿನಿ ಸುದ್ದಿ; ವಿಯೆಟ್ನಾಂ: ಕಾಂಡೋಮ್ ಮರುಬಳಕೆ ಮಾಡಲು ಮುಂದಾದ ಯುವತಿಯರ ತಂಡವೊಂದನ್ನು ಪೊಲೀಸರು ಬಂಧಿಸಿರುವ ಘಟನೆ ವಿಯೆಟ್ನಾಂ ನಲ್ಲಿ ನಡೆದಿದ್ದು, ಬಂದಿತರ ಬಳಿ ಇದ್ದ 3.20 ಲಕ್ಷ ಕಾಂಡೋಮ್ ಅನ್ನು ವಶಕ್ಕೆ ಪಡೆಯಲಾಗಿದೆ.
ವೇರ್ ಹೌಸ್ ಒಂದರಲ್ಲಿ ಈ ಕಾಂಡೋಮ್ಗಳನ್ನು ಶೇಖರಿಸಿ ಇಡಲಾಗಿತ್ತು. ಹಲವರು ಮರುಬಳಕೆಯಾದ ಈ ಕಾಂಡೋಮ್ ಗಳನ್ನು ಖರೀದಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಬರೋಬ್ಬರಿ 360 ಕೆಜಿಯಷ್ಟು ಕಾಂಡೋಮ್ ಗಳನ್ನು ಸೀಜ್ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.
ಅಲ್ಲದೇ ವೇರ್ ಹೌಸ್ ನ ಮಾಲಕಿ ಸೇರಿ ಹಲವರನ್ನು ಬಂಧಿಸಲಾಗಿದೆ. ಇವರು ಒಮ್ಮೆ ಬಳಕೆಯಾದ ಕಾಂಡೋಮ್ ಗಳನ್ನು ಮತ್ತೆ ಸಂಗ್ರಹಿಸಿ, ಅವುಗಳನ್ನು ತೊಳೆದು, ಅದಕ್ಕೆ ಕೋಲುಗಳಿಗೆ ಹಾಕಿ ಅದನ್ನು ಒಣಗಿಸಿ ಇಡುತ್ತಿದ್ದರು. ಹೀಗೆ ಒಣಗಿಸಿ ನಂತರ ಅದನ್ನು ಸಮ ಸ್ಥಿತಿಗೆ ತಂದು ನಂತರ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ