ಪ್ರಗತಿವಾಹಿನಿ ಸುದ್ದಿ: ವಿಜಯಪುರದ ಹೊನವಾಡ ಗ್ರಾಮದ ರೈತರ 1200 ಎಕರೆ ಭೂಮಿ ವಕ್ಫ್ ಬೋರ್ಡ್ ಗೆ ಸೇರಿದೆ ಎಂಬ ವಿಚಾರ ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ವಿವಾದ ಹೆಚ್ಚುತ್ತಿದ್ದಂತೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್, ವಿವಾದಕ್ಕೆ ತೆರೆ ಎಳೆದಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ಹಿನವಾಡ ಗ್ರಾಮದಲ್ಲಿ 1200 ಎಕರೆ ರೈತರ ಭೂಮಿ ವಕ್ಫ್ ಮಂಡಳಿಗೆ ಸೇರ್ಪಡೆ ಮಾಡಲಾಗಿದೆ ಎಂಬುದು ಸುಳ್ಳು ಸುದ್ದಿ. ರೈತರು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಈ ರೀತಿ ಸುಳ್ಳು ಸುದ್ದಿ ಹಬ್ಬಸಲಾಗಿದೆ ಎಂದು ಹೇಳಿದರು.
ಹೊನವಾಡ ಗ್ರಾಮದಲ್ಲಿ ಕೇವಲ 10-11 ಎಕರೆ ಮಾತ್ರ ವಕ್ಫ್ ಗೆ ಸೇರಿದ್ದು. ಬೇರೆ ಯಾವುದೇ ಭೂಮಿ ವಕ್ಫ್ ಗೆ ಸೇರಿಲ್ಲ. ಎಲ್ಲಾ ಭೂಮಿಯೂ ರೈತರಿಗೆ ಮಾತ್ರ ಸೇರಿದೆ ಎಂದು ಸ್ಪಷ್ಟಪಡಿಸಿದರು.
1974ರ ಗೆಜೆಟ್ ನೋಟಿಫಿಕೇಶನ್ ನಲ್ಲಿ ತಪ್ಪಾಗಿ ನಮೂದಿಸಲಾಗಿದೆ. 1977ರಲ್ಲಿ ವಕ್ಫ್ ಮಂಡಳಿ ಈ ತಪ್ಪನ್ನು ಸರಿಪಡಿಸಿದೆ. ಹಿನವಾಡ ಗ್ರಾಮದ ಯಾವ ರೈತರಿಗೂ ನೋಟಿಸ್ ಕೊಟ್ಟಿಲ್ಲ. ನೋಟಿಸ್ ಕೊಡಲಾಗಿದೆ ಎಂಬುದು ಸುಳ್ಳು. ಇನ್ನು ಇಂಡಿ ತಹಶೀಲ್ದಾರ್ 433 ರೈತರಿಗೆ ನೋಟಿಸ್ ನೀಡಿದ್ದಾರೆ ಎಂಬುದ ಬಗ್ಗೆ ತನಿಖೆ ನಡೆಸಲಾಗುವುದು. ಅಧಿಕಾರಿಗಳ ಎಡವಟ್ಟಿನಿಂದಾಗಿ ಸಿಂದಗಿಯ ಗುರುಲಿಂಗ ವಿರಕ್ತ ಮಠಕ್ಕೆ ನೋಟಿಸ್ ನಿಡಲಾಗಿತ್ತು. ಆದರೆ ಈಗ ಇದನ್ನು ತಹಶೀಲ್ದಾರ್ ಸರಿಪಡಿಸಿದ್ದಾರೆ. ಸರ್ವೆ ನಂ.1022ರಲ್ಲಿರುವ 1 ಎಕರೆ 36 ಗುಂಟೆ ಜಮೀನು ಮಠಕ್ಕೆಸೇರಿದೆ ಎಂದರು.
ಯಾವುದೇ ರೈತರು ಆತಂಕ ಪಡುವ ಅಗತ್ಯವಿಲ್ಲ ಹೊನಾವಾಡ ಗ್ರಾಮದಲ್ಲಿ 10-11 ಎಕರೆ ಹೊರತುಪಡಿಸಿ ಎಲ್ಲಾ ಭೂಮಿ ರೈತರಿಗೆ ಸೇರಿದ್ದು. ಗೊಂದಲ ಬಗೆಹರಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ರಚನೆ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ