Latest

*ಕೆಎಂಸಿ ಸರ್ಜನ್ ಡಾ.ಬಾಲಾಜಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಮಾದಕ ವಸ್ತು ಜಾಲದ ವಿರುದ್ಧ ಸಮರ ಮುಂದುವರೆಸಿರುವ ಮಂಗಳೂರು ಸಿಸಿಬಿ ಪೊಲೀಸರು ಇಂದು ಮತ್ತೋರ್ವ ವೈದ್ಯ ಹಾಗೂ ವೈದ್ಯಕೀಯ ವಿದ್ಯಾರ್ಥಿ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.

ಗಾಂಜಾ ಪ್ರಕರಣ ಸಂಬಂಧ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸರ್ಜನ್ ಓರ್ವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಕೆಎಂಸಿ ಸರ್ಜನ್ ಡಾ.ಬಾಲಾಜಿ (29) ಹಾಗೂ ಪಿಜಿ ವಿದ್ಯಾರ್ಥಿ ಡಾ.ರಾಘವ ದತ್ತಾ ಎಂದು ತಿಳಿದುಬಂದಿದೆ.

Home add -Advt

ಮಂಗಳೂರು ಕೆಎಂಸಿಯಲ್ಲಿ ಸರ್ಜನ್ ಆಗಿರುವ ಡಾ.ಬಾಲಾಜಿ ಬೆಂಗಳೂರಿನ ಹಲಸೂರು ಮೂಲದವರಾಗಿದ್ದಾರೆ. ಇನ್ನು ಬಂಧಿತ ಪಿಜಿ ವಿದ್ಯಾರ್ಥಿ ರಾಘವ ದತ್ತಾ ಆಂಧ್ರ ಮೂಲದವನೆಂದು ತಿಳಿದುಬಂದಿದೆ ಎಂದು ಮಂಗಳೂರು ಪೊಲೀಸರು ಮಾಹಿತಿ ನಿಡಿದ್ದಾರೆ.

*ಸಿದ್ದರಾಮಯ್ಯಗೆ ಶಕ್ತಿ ದೇವತೆ ನೀಡಿದ ಸಂದೇಶವೇನು? *

https://pragati.taskdun.com/vidhanasabha-electionsiddaramaiahchikkamma-devi/

Related Articles

Back to top button