Film & EntertainmentKannada NewsLatestPolitics
*ಕಾಲ್ತುಳಿತ ಬೆನ್ನಲ್ಲೇ ತಮಿಳುನಾಡಿನಲ್ಲಿ ನಟ ವಿಜಯ್ ಪ್ರವಾಸ ರದ್ದು*

ಪ್ರಗತಿವಾಹಿನಿ ಸುದ್ದಿ: ಕರೂರ್ ಕಾಲ್ತುಳಿತ ದುರಂತದಲ್ಲಿ 41 ಜನರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ತಮಿಳು ವೆಟ್ರಿ ಕಳಗಂ ಪಕ್ಷ ಮುಖ್ಯಸ್ಥ, ನಟ ವಿಜಯ್ ತಮಿಳುನಾಡು ಪ್ರವಾಸವನ್ನು ಎರಡು ವಾರಗಳ ಕಾಲ ರದ್ದು ಪಡಿಸಿದ್ದಾರೆ.
ಕರೂರಿನಲ್ಲಿ ವಿಜಯ್ ಅವರು ನಡೆಸಿದ್ದ ರಾಜಕೀಯ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿತ್ತು. ಘಟನೆಯಲ್ಲಿ 41 ಜನರು ಸಾವನ್ನಪ್ಪಿದ್ದರು. ನೂರಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಬೆನ್ನಲ್ಲೇ ಪ್ರೀತಿಪಾತ್ರರನ್ನು ಕಡೆದುಕೊಂಡ ನೋವು ಹಾಗೂ ದು:ಖದಲ್ಲಿರುವ ಪರಿಸ್ಥಿತಿಯಲ್ಲಿ ಮುಂದಿನ ಎರಡು ವಾರಗಳ ಕಾಲ ನಮ್ಮ ಪಕ್ಷದ ನಾಯಕ ವಿಜಯ್ ಅವರ ಸಾರ್ವಜನಿಕ ಸಭೆ, ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಟಿವಿಕೆ ಪಕ್ಷ ಎಕ್ಸ್ ಖಾತೆಯಲ್ಲಿ ತಿಳಿಸಿದೆ.