Kannada NewsKarnataka NewsLatest

ವಿನಯ ಕುಲಕರ್ಣಿ ಮಾವ ಗಂಗಣ್ಣ ಶಿಂತ್ರಿ ನಿಧನ

ಗಂಗಣ್ಣ ಶಿಂತ್ರಿ

ಪ್ರಗತಿವಾಹಿನಿ ಸುದ್ದಿ, ಸವದತ್ತಿ – ಸವದತ್ತಿಯ ಗಣ್ಯ ನಾಗರಿಕರೂ, ಸಮಾಜದ ಹಿರಿಯರೂ ಆಗಿದ್ದ ಗಂಗಣ್ಣ ಶಿಂತ್ರಿ ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಗಂಗಣ್ಣ ಶಿಂತ್ರಿ ಸವದತ್ತಿ ಶಾಸಕರೂ, ವಿಧಾನಸಭಾ ಉಪಾಧ್ಯಕ್ಷರೂ ಆಗಿರುವ ಆನಂದ ಮಾಮನಿಯವರ ಮಾವ. ಮಾಜಿ ಸಚಿವ ವಿನಯ ಕುಲಕರ್ಣಿ ಮಾವ ಕೂಡ.

Home add -Advt

ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂಡಲಗಾ ಜೈಲಿನಲ್ಲಿರುವ ವಿನಯ ಕುಲಕರ್ಣಿಗೆ ಮಾವನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು 4 ಗಂಟೆ ಅವಕಾಶ ನೀಡಲಾಗಿತ್ತು.

ಅವರ ಅಂತ್ಯಕ್ರಿಯೆ ಯಡ್ರಾವಿ ರಸ್ತೆಯಲ್ಲಿರುವ ಐಐಟಿ ಕಾಲೇಜು ಹತ್ತಿರ ಶಿಂತ್ರಿಯವ ತೋಟದ ಜಮೀನಿನಲ್ಲಿ  ಸಂಜೆ  ನಡೆಯಿತು.

Related Articles

Back to top button