Latest

*ಗ್ಯಾಸ್ ಗೀಸರ್ ದುರಂತ: ತಾಯಿ-ಮಗ ಇಬ್ಬರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಗ್ಯಾಸ್ ಗೀಸರ್ ಸೋರಿಕೆಯಾಗಿ ಮನೆಯಲ್ಲಿದ್ದ ತಾಯಿ ಹಾಗೂ ಮಗ ಇಬ್ಬರೂ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿಯ ಜ್ಯೂರಿನಗರದಲ್ಲಿ ನಡೆದಿದೆ.

Home add -Advt

ಶೋಭಾ (40) ಹಾಗೂ ಮಗ ದಿಲೀಪ್ (17) ಮೃತರು. ದಿಲೀಪ್ ಗ್ಯಾಸ್ ಗೀಸರ್ ಆನ್ ಮಾಡಿ ಸ್ನಾನಕ್ಕೆ ಹೋಗಿದ್ದರು. ಈ ವೇಳೆ ಬಾತ್ ರೂಮ್ ನಲ್ಲಿ ಗೀಸರ್ ನಿಂದ ಕಾರ್ಬನ್ ಮೊನಾಕ್ಸೈಡ್ ಸೋರಿಕೆಯಾಗಿದೆ. ವಿಷಾನೀಲದಿಂದಾಗಿ ಉಸಿರುಗಟ್ಟಿ ದಿಲೀಪ್ ಸ್ನಾನದ ಮನೆಯಲ್ಲೇ ಸಾವನ್ನಪ್ಪಿದ್ದಾರೆ.

ಮಗ ಎಷ್ಟು ಹೊತ್ತಾದರೂ ಸ್ನಾದ ಮನೆಯಿಂದ ಬಾರದಿರುವುದನ್ನು ಕಂಡು, ತಾಯಿ ಶೋಭಾ ಕರೆದಿದ್ದಾರೆ. ಆದರೂ ಮಗನ ಸುಳಿವಿಲ್ಲ. ಗಾಬರಿಯಾದ ತಾಯಿ ಬಾತ್ ರೂಮ್ ನ ಬಾಗಿಲು ತೆರೆದು ನೋಡಿದಾಗ ಮಗ ಉಸಿರುಗಟ್ಟಿ ಸಾವನ್ನಪ್ಪಿದ್ದ. ವಿಷಾನೀಲದಿಂದ ಶೋಭಾ ಕೂಡ ತೀವ್ರ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲಾಗಲೇ ಶೋಭಾ ಕೂಡ ಉಸಿರು ಚೆಲ್ಲಿದ್ದಾರೆ.

Related Articles

Back to top button