ಪ್ರಗತಿ ವಾಹಿನಿ ಸುದ್ದಿ ಮುಂಬೈ: ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ಹಿಂದೆ ಸರಿಯುತ್ತಿರುವ ಬಗ್ಗೆ ವಿರಾಟ್ ಕೋಹ್ಲಿ ಟೀಂ ಇಂಡಿಯಾಗೆ ಮುಂಚಿತವಾಗಿಯೇ ತಿಳಿಸಿದ್ದರೆಂಬ ಗುಟ್ಟನ್ನು ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬೂಮ್ರಾ ಬಾಯ್ಬಿಟ್ಟಿದ್ದಾರೆ.
ಕೇಪ್‌ಟೌನ್‌ನಲ್ಲಿ ಮೂರನೇ ಟೆಸ್ಟ್‌ನಲ್ಲಿ ಭಾರತ ತಂಡ ಸೋತ ಬಳಿಕ ವಿರಾಟ್ ಕೋಹ್ಲಿ ನಾಯಕತ್ವ ತ್ಯಜಿಸುವುದಾಗಿ ಅಧೀಕೃತವಾಗಿ ಹೇಳಿಕೆ ನೀಡಿದ್ದರು. ಆದರೆ ಅವರು ಈ ಕುರಿತು ಟೀಂ ಇಂಡಿಯಾಗೆ ಮೊದಲೇ ಮಾಹಿತಿ ನೀಡಿದ್ದರು ಎಂದು ವರದಿಯಾಗಿತ್ತು. ಇದು ಸತ್ಯ ಎಂದು ಬೂಮ್ರಾ ಕೆಲವು ಆಂಗ್ಲ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಟೀಂ ಇಂಡಿಯಾ ಆಟಗಾರರ ಅನೌಪಚಾರಿಕ ಸಭೆ ಕರೆದು ಕೋಹ್ಲಿ ತಮ್ಮ ನಿರ್ಧಾರ ತಿಳಿಸಿದ್ದರು. ಆದರೆ ಇದನ್ನು ಯಾರಿಗೂ ಕೂಡಲೇ ಹೇಳಬಾರದೆಂದು ಅವರು ಸೂಚಿಸಿದ್ದರು. ಕೋಹ್ಲಿ ಅವರ ದಿಢೀರ್ ನಿರ್ಧಾರದಿಂದ ನಾನೂ ಸೇರಿದಂತೆ ಬಹುತೇಕ ಆಟಗಾರರು ಆಘಾತಗೊಂಡಿದ್ದೆವು.
ವಿರಾಟ್ ಕೋಹ್ಲಿಗೆ ತಮ್ಮ ಶಕ್ತಿ ಸಾಮರ್ಥ್ಯದ ಅರಿವಿದೆ. ಅವರ ನಾಯಕತ್ವವನ್ನು ನಾವು ಗೌರವಿಸಿದ್ದೇವೆ. ನಾನು ಅವರ ನಾಯಕತ್ವದಲ್ಲಿಯೇ ಟೀಂ ಇಂಡಿಯಾ ಆಟಗಾರನಾಗಿ ಪಾದಾರ್ಪಣೆ ಮಾಡಿದ್ದು ಹೆಮ್ಮೆಯ ಸಂಗತಿ. ಅವರ ನಾಯಕತ್ವದಲ್ಲಿ ಭಾರತೀಯ ಕ್ರಿಕೇಟ್ ತಂಡದ ಗುರಿ ನಿಖರಗೊಂಡಿದೆ. ಭಾರತೀಯ ತಂಡವನ್ನು ಸಶಕ್ತವಾಗಿ ರೂಪಿಸುವಲ್ಲಿ ಕೋಹ್ಲಿ ಪಾತ್ರ ಮಹತ್ವದ್ದು ಎಂದು ಅವರು ಹೇಳಿದ್ದಾರೆ.
ಟೀಂ ಇಂಡಿಯಾಗೆ ಮೊದಲೇ ತಿಳಿಸಿದ್ರಾ ವಿರಾಟ್ ಕೋಹ್ಲಿ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ