Belagavi NewsBelgaum News

*ವಿಶ್ವ ಹಿಂದೂ ಪರಿಷತ್, ಬಜರಂಗದಳದ ನೇತೃತ್ವದಲ್ಲಿ ಪೊಲೀಸ್ ಕಮಿಷನರ್ ಗೆ ಮನವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇತ್ತೀಚೆಗೆ ಬೆಳಗಾವಿ ನಗರದ ಸುತ್ತಮುತ್ತಲು ನಡೆದ ಹಿಂದು ವಿರೋಧಿ ಘಟನೆಗಳನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಬೆಳಗಾವಿ ನಗರದ ಕಮಿಷನರ್ ಕಚೇರಿ ಮುಂಭಾಗದಲ್ಲಿ ಬಜರಂಗದಳ ನೇತೃತ್ವದಲ್ಲಿ ಪ್ರತಿಭಟಿಸಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಅವರಿಗೆ ಮನವಿ ಸಲ್ಲಿಸಲಾಯಿತು.‌ 

ಪಾಂಗುಳಗಲ್ಲಿ ಅಶ್ವತ್ಥಾಮ ದೇವಸ್ಥಾನಕ್ಕೆ ಮುಸ್ಲಿಂ ಯುವಕನಿಂದ ಕಲ್ಲೇಸಯಲಾಗಿದೆ. ಕಲ್ಲು ಎಸೆದ ಆರೋಪಿ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ದರ್ಬಾರ್ ಗಲ್ಲಿ ಸಾರ್ವಜನಿಕವಾಗಿ ಸ್ಕ್ರೀನ್ ಮೂಲಕ ಔರಂಗಜೇಬ್ ,ಟಿಪ್ಪು ಸುಲ್ತಾನ್ ಸಾಹಸ ಪ್ರದರ್ಶನ ಮಾಡಿ, ಸಂಭಾಜೀ ಮಹಾರಾಜರಿಗೆ ಅಪಮಾನ ಮಾಡಿ ಶಾಂತಿ‌ ಕದಡುವ ಕೆಲಸ ಮಾಡ್ತಿದ್ದಾರೆ ಇದನ್ನು ನಿಲ್ಲಿಸಬೇಕು. ಕೇದನೂರ ಪಂಚಾಯತ್ ವ್ಯಾಪ್ತಿಯ ಮಹಾದೇವ ಮಂದಿರದ ಬಳಿ ನಮಾಜ್ ಮಾಡಿ, ಮಾಂಸಾಹಾರ ಸೇವನೆ ಮಾಡುತ್ತಿದ್ದಾರೆ. ಹೆಣ್ಣುಮಕ್ಕಳನ್ನು ಕರದುಕೊಂಡು ಮೋಜು‌ಮಸ್ತಿ ಮಾಡುತ್ತಿರುವುದನ್ನು ನಿಲ್ಲಿಸಬೇಕು. ಬೆಳಗಾವಿ ಜಿಲ್ಲೆಯಲ್ಲಿ ಗಾಂಜಾ ನಶೆಯಲ್ಲಿ ಅನೇಕ ದುರ್ಘಟನೆಗಳು ನಡೆಯುತ್ತಿವೆ. ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.‌

Home add -Advt

Related Articles

Back to top button