Belagavi NewsBelgaum NewsPolitics

*ಸಿಎಂ ಬದಲಾವಣೆ ವಿಚಾರ: ಸತೀಶ್ ಜಾರಕಿಹೊಳಿ ಪರ ಶಾಸಕ ವಿಶ್ವಾಸ ವೈದ್ಯ ಬ್ಯಾಟಿಂಗ್* 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸತೀಶ ಜಾರಕಿಹೊಳಿಗೆ ಸಿಎಂ ಸ್ಥಾನ ಕೊಟ್ಟರೆ ಒಳ್ಳೆಯದು, ಉತ್ತರ ಕರ್ನಾಟಕ ಅಭಿವೃದ್ಧಿ ಆಗುತ್ತೆ. ನಮ್ಮ ಜಿಲ್ಲೆಯವರೆ ಸಿಎಂ ಆದರೆ ಹೆಮ್ಮೆ ಪಡುವ ವಿಷಯ ಎಂದು ಶಾಸಕ ವಿಶ್ವಾಸ ವೈದ್ಯ ಬ್ಯಾಟಿಂಗ್ ಮಾಡಿದ್ದಾರೆ.

ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಶಾಸಕ ವಿಶ್ವಾಸ ವೈದ್ಯ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಆಗೋದಿಲ್ಲ. ಮಂತ್ರಿಗಳು, ಶಾಸಕರು ಸಿಎಂ ಪರವಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಖಂಡಿತ ಮುಂದುವರೀತ್ತಾರೆ ಎಂದರು.

ಸತೀಶ ಜಾರಕಿಹೊಳಿ ಮುಂದಿನ ಸಿಎಂ ಅಭಿಯಾನ ವಿಚಾರವಾಗಿ ಮಾತನಾಡಿದ ಅವರು,  ಅದೆಲ್ಲಾ ಹೈಕಮಾಂಡಿಗೆ ಬಿಟ್ಟ ವಿಚಾರ. ಸಚಿವ ಸತೀಶ ಜಾರಕಿಹೊಳಿಗೆ ಸಿಎಂ ಸ್ಥಾನ ಕೊಟ್ಟರೆ ಒಳ್ಳೆಯದು. ಉತ್ತರ ಕರ್ನಾಟಕ ಅಭಿವೃದ್ಧಿ ಆಗುತ್ತೆ. ನಮ್ಮ ಜಿಲ್ಲೆಯವರೆ ಸಿಎಂ ಆದರೆ ಹೆಮ್ಮೆ ಪಡುವ ವಿಷಯ.ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಸಂಘಟನೆ ಇದೆ. ಸತೀಶ ಜಾರಕಿಹೊಳಿಗೆ ಸಿಎಂ ಆಗೋ ಎಲ್ಲ ಅರ್ಹತೆ ಇದೆ. ಬೆಳಗಾವಿ ಜಿಲ್ಲೆಯವರೇ ಸಿಎಂ ಆಗಬೇಕು ಅಂತಾ ಇದೆ ಎಂದು ಶಾಸಕ ವಿಶ್ವಾಸ ವೈದ್ಯ ತಿಳಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button