Kannada NewsKarnataka News
ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಹೋಂ ಐಸೋಲೇಶನ್ ಕಿಟ್ ವಿತರಿಸಿದ ಲಕ್ಷ್ಮಿ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ - ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವಿವಿಧ ಕೋವಿಡ್ ಕೇರ್ ಸೆಂಟರ್ ಹಾಗೂ ಸ್ವ್ಯಾಬ್ ಟೆಸ್ಟಿಂಗ್ ಕೇಂದ್ರಗಳಿಗೆ ಗುರುವಾರ ಭೇಟಿ ನೀಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಸೋಂಕಿತರಿಗೆ ಧೈರ್ಯ ತುಂಬಿ, ಹೋಂ ಐಸೋಲೇಶನ್ ಕಿಟ್ ಗಳನ್ನು ವಿತರಿಸಿದರು.
ಮೊದಗಾ ಗ್ರಾಮದ ನಿರ್ಮಲ ನಗರದಲ್ಲಿರುವ ಕಾರ್ಡಿನಲ್ ಗ್ರೇಸಿಯಸ್ ಆಸ್ಪತ್ರೆಯ ಕೋವಿಡ್ ಸೋಂಕಿತರ ಕೇಂದ್ರಕ್ಕೆ ಭೇಟಿ ನೀಡಿ ಸೋಂಕಿತರ ಆರೋಗ್ಯದ ಬಗ್ಗೆ ವಿಚಾರಿಸಿ ಆತ್ಮಸ್ಥೈರ್ಯವನ್ನು ತುಂಬಿದರು.
ಈ ಸಂದರ್ಭದಲ್ಲಿ ಸೋಂಕಿತರಿಗೆ ಹಣ್ಣು ಹಂಪಲಗಳನ್ನು ವಿತರಿಸಿ, ಸರಿಯಾದ ಚಿಕಿತ್ಸೆ ದೊರೆಯುತ್ತಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಅಗತ್ಯ ಔಷಧೋಪಚಾರಗಳ ಕೊರತೆ ಆಗದಂತೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಕ್ಷೇತ್ರದ ಮಾವಿನಕಟ್ಟಿ ಗ್ರಾಮದ ಗಂಟಲು ದ್ರವಗಳ (ಸ್ವ್ಯಾಬ್ ಟೆಸ್ಟಿಂಗ್) ಮಾದರಿಯನ್ನು ಸಂಗ್ರಹಿಸುವ ಕೇಂದ್ರಕ್ಕೆ ಭೇಟಿ ನೀಡಿ ಗ್ರಾಮಸ್ಥರ ಆರೋಗ್ಯದ ಬಗ್ಗೆ ವಿಚಾರಿಸಿ, ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಕೋವಿಡ್ ಹೋಮ್ ಐಸೋಲೇಷನ್ ಕಿಟ್ ಗಳನ್ನು ವಿತರಿಸಿದರು.
ಹೆಚ್ಚಿನ ಪ್ರಮಾಣದಲ್ಲಿ ಗಂಟಲು ದ್ರವಗಳ ಮಾದರಿಯನ್ನು ಸಂಗ್ರಹಿಸುವಂತೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಲಸಿಕೆಗಳನ್ನು ಪೂರೈಸುವಂತೆ ಸಿಬ್ಬಂದಿಗೆ ನಿರ್ದೇಶನ ನೀಡಿದ ಹೆಬ್ಬಾಳಕರ್, ಅನಗತ್ಯವಾಗಿ ಹೊರಗಡೆ ಬರದೇ, ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಜರ್ ಗಳ ಬಳಕೆ ಮಾಡುವ ಮೂಲಕ ಆದಷ್ಟು ಬೇಗ ಕೊರೋನಾ ಮುಕ್ತವನ್ನಾಗಿಸಿ ನೆಮ್ಮದಿಯ ಜೀವನವನ್ನು ನಡೆಸಬೇಕಿದೆ ಎಂದು ಸಾರ್ವಜನಿಕರಲ್ಲಿ ವಿನಂತಿಸಿದರು.
ಇದೇ ಸಮಯದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತರ ಆರೋಗ್ಯದ ಬಗ್ಗೆ ವಿಚಾರಿಸಿ, ಅವರ ಕುಂದುಕೊರತೆಗಳ ಬಗ್ಗೆ ಆಲಿಸಿ, ಸರ್ಕಾರದಿಂದ ಸಿಗಲಾಗುವ ಎಲ್ಲ ಪ್ರಯೋಜಗಳನ್ನು ಮಾಡಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು, ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ