Kannada NewsKarnataka NewsLatestPolitics

*ಜೆಡಿಎಸ್ ನ ಎರಡು ಬಣಗಳ ನಡುವೆ ಮಾರಾಮಾರಿ: ಬಿಗುವಿನ ವಾತಾವರಣ ನಿರ್ಮಾಣ*

ಪ್ರಗತಿವಾಹಿನಿ ಸುದ್ದಿ: ತುಮಕೂರು ಲೋಕಸಭಾ ಅಭ್ಯರ್ಥಿ ವಿ.ಸೋಮಣ್ಣ ಚುನಾವಣೆ ಪ್ರಚಾರದ ವೇಳೆ ಜೆಡಿಎಸ್ ಬಣಗಳ ನಡುವೇ ಮಾರಾಮಾರಿ ಆಗಿರುವ ಘಟನೆ ಇಂದು ನಡೆದಿದೆ.

Home add -Advt

ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ನೊಣವಿನಕೆರೆ ಹೋಬಳಿಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯಾರ್ಥಿ ವಿ.ಸೋಮಣ್ಣ ಪ್ರಚಾರದ ವೇಳೆ ಜೆಡಿಎಸ್ ನ ಎರಡು ಬಣಗಳ ನಡುವೆ ಮಾರಾಮಾರಿ ನಡೆದಿದೆ. ನೊಣವಿನಕೆರೆಯಲ್ಲಿ ಸೋಮಣ್ಣ ಪ್ರಚಾರ ನಡೆಸುತ್ತಿದ್ದಾಗ ಜೆಡಿಎಸ್ ಪ್ರಭಾವಿ ಮುಖಂಡ ರಾಕೇಶ್ ಗೌಡ ಸೇರಿದಂತೆ ಅನೇಕ ಮೂಲ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಗುಂಪು ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್ ನೇತೃತ್ವದಲ್ಲಿ ಪ್ರಚಾರ ಸಭೆ ನಡೆಸಬಾರದು ಎಂದು ವಾಗ್ವಾದ ನಡೆದಿದೆ. ಈ ವೇಳೆ ರಾಕೇಶ್ ಗೌಡ ಗುಂಪು ಹಾಗೂ ಕೆ.ಟಿ ಶಾಂತಕುಮಾರ್ ಗುಂಪುಗಳ ನಡುವೆ ಭಾರೀ ವಾಗ್ವಾದ ಜಗಳ ನಡೆದು ಕೈ ಕೈ ಮಿಲಾಯಿಸುವ ಹಂತ ತಲುಪಿದಾಗ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹಾಗೂ ಅಭ್ಯಾರ್ಥಿ ವಿ.ಸೋಮಣ್ಣ ಪರಿಸ್ಥಿತಿ ತಿಳಿಗೊಳಿಸುವ ಕೆಲಸಕ್ಕೆ ಮುಂದಾದರು.‌

ಕೆಲ ಕಾಲ ಬಿಗುವಿನ ವಾತಾವರಣ ಉಂಟಾಗಿ ಗೊಂದಲಕ್ಕೆ ಕಾರಣವಾಯಿತು ಕಾರ್ಯಕರ್ತರನ್ನ ಸಮಾಧಾನ ಪಡಿಸಿದ ಸಚಿವರು ಪ್ರಚಾರಕ್ಕೆ ಮುಂದುವರೆಸಿದರು. ಜೆಡಿಎಸ್ ಗುಂಪುಗಳ ನಡುವೆ ಬಣ ರಾಜಕೀಯ ಬುದಿ ಮುಚ್ಚಿದ ಕೆಂಡದಂತ್ತಾಗಿದ್ದು‌, ಎರಡು ಬಣಗಳ ರಾಜಕೀಯ ಮೇಲಾಟಕ್ಕೆ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ನವರಿಗೆ ಮಗ್ಗಲ ಮುಳ್ಳುವಾಗಿದೆ. ಪ್ರಚಾರ ಸಭೆಯಲ್ಲಿ ಮುಖಂಡರಾದ ಬಿಜೆಪಿ ಗಂಗರಾಜು ತಾಲ್ಲೋಕು ಅಧ್ಯಕ್ಷ ಬಳ್ಳೆಕಟ್ಟೆ ಸುರೇಶ್. ಸೇರಿದಂತೆ ಅನೇಕರು ಉಪಸ್ಥಿತರಿದರು.

Related Articles

Back to top button