ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸೆಪ್ಟಂಬರ್ 3ರಂದು ನಡೆದಿರುವ ಬೆಳಗಾವಿ, ಹುಬ್ಬಳ್ಳಿ -ಧಾರವಾಡ ಮತ್ತು ಕಲಬುರಗಿ ಮಹಾನಗರ ಪಾಲಿಕೆಗಳ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಬೆಳಗ್ಗೆ 10 ಗಂಟೆಯ ಹೊತ್ತಿಗೆ ಫಲಿತಾಂಶ ಬಹುತೇಕ ಪ್ರಕಟವಾಗಲಿದೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 58 ವಾರ್ಡ್ ಗಳಿದ್ದು, 385 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತ ಎಣಿಕೆ ಬಿ.ಕೆ.ಮಾಡೆಲ್ ಸ್ಕೂಲ್ ನಲ್ಲಿ ಆರಂಭವಾಗಿದೆ. 12 ಕೊಠಡಿಗಳಲ್ಲಿ ಮತ ಎಣಿಕೆಗೆ ವ್ಯವಸ್ಥಾ ಮಾಡಲಾಗಿದ್ದು, ತಲಾ 2 ಟೇಬಲ್ ಹಾಕಲಾಗಿದೆ. 12 ಚುನಾವಣಾಧಿಕಾರಿಗಳ ನೇಮಕವಾಗಿದೆ.
ಶೇ.50.41 ರಷ್ಟು ಮತದಾನವಾಗಿದ್ದು, ಕಳೆದ 25 ವರ್ಷಗಳಲ್ಲಿ ಇದೇ ಮೊದಲಬಾರಿಗೆ ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ನಡೆದಿದೆ. ಬಿಜೆಪಿ 56 ವಾರ್ಡ್, ಕಾಂಗ್ರೆಸ್ 45 ವಾರ್ಡ್ ಗಳಲ್ಲಿ ಸ್ಪರ್ಧಿಸಿವೆ. ಜೆಡಿಎಸ್, ಆಮ್ ಆದ್ಮಿ. ಎಐಎಂಐಎಂ ಕೂಡ ಅಭ್ಯರ್ಥಿ ಇಳಿಸಿವೆ.
ಈಗಾಗಲೆ ಮೂರೂ ಕಡೆ ಸ್ಟ್ರಾಂಗ್ ರೂಂ ಓಪನ್ ಆಗಿದ್ದು, ಅಂಚೆ ಮತಗಳನ್ನು ಬೇರ್ಪಡಿಸಲಾಗಿದ್ದು, ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆ: ಒಟ್ಟೂ ಮತದಾನ, ಪ್ರತಿ ವಾರ್ಡ್ ಮಾಹಿತಿ ಇಲ್ಲಿದೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ