ಬೆಳಗಾವಿ ಕ್ಷೇತ್ರದ ಮತದಾರರು ಕಾಂಗ್ರೆಸ್ ನವರು, ಮರಳಿ ಕರೆ ತರುತ್ತೇವೆ – ಸತೀಶ್ ಜಾರಕಿಹೊಳಿ
ಬಿಜೆಪಿ ಬೇರೆ ಯಾವುದಾದರೂ ಅಭ್ಯರ್ಥಿ ಹಾಕಿದ್ದರೆ ಸ್ವಲ್ಪವಾದರೂ ಫೈಟ್ ಆಗುತ್ತಿತ್ತು. ಈಗ ಸುರೇಶ ಅಂಗಡಿಯವರ ಪತ್ನಿಗೆ ಟಿಕೆಟ್ ಕೊಟ್ಟಿದ್ದಾರೆ. ಹಾಗಾಗಿ ನಮ್ಮ ಗೆಲುವು ಸುಲಭವಾಗಲಿದೆ. ಮತದಾನ ಒನ್ ಸೈಡ್ ಆಗಲಿದೆ ಎಂದು ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಲೋಕಸಭಾ ಕ್ಷೇತ್ರದ ಮತದಾರರು ಮೂಲತಃ ಕಾಂಗ್ರೇಸ್ ನವರು. ಕಳೆದ 3 -4 ಚುನಾವಣೆಗಳಲ್ಲಿ ಯಾವ್ಯಾವುದೋ ಕಾರಣಕ್ಕಾಗಿ ಬಿಜೆಪಿಗೆ ಹೋಗಿದ್ದಾರೆ. ಅವರು ಬದಲಾಗುತ್ತಾರೆ., ಬದಲಾಯಿಸುತ್ತೇವೆ – ಇಂತಹ ವಿಶ್ವಾಸ ವ್ಯಕ್ತಪಡಿಸಿದವರು ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ.
ಪ್ರಗತಿವಾಹಿನಿ ಜೊತೆ ಮಾತನಾಡಿದ ಅವರು, ಹಿಂದಿನಿಂದಲೂ ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತ ಬಂದಿತ್ತು. ಕೆಲವು ಅಲೆಗಳಿಂದಾಗಿ 3 -4 ಚುನಾವಣೆಗಳಲ್ಲಿ ಬಿಜೆಪಿ ಬಂದಿದೆ. ಆದರೆ ಈ ಬಾರಿ ಯಾವುದೇ ಅಲೆ ಇಲ್ಲ. ಹಾಗಾಗಿ ಮತದಾರರು ಕಾಂಗ್ರೆಸ್ ಗೆ ಮರಳಲಿದ್ದಾರೆ ಎಂದರು.
2014ರ ಲೋಕಸಭಾ ಚುನಾವಣೆಯಲ್ಲಿ ನೀಡಿದ್ದ ಆಶ್ವಾಸನೆಗಳ ಪೈಕಿ ಶೇ.90ರಷ್ಟು ಆಶ್ವಾಸನೆಗಳನ್ನು ಬಿಜೆಪಿ ಈಡೇರಿಸಿಲ್ಲ. ಶೇ. 10ರಷ್ಟನ್ನು ಮಾತ್ರ ಪೂರೈಸಿದೆ. ಹಾಗಾಗಿ ಜನರು ಬಿಜೆಪಿಯಲ್ಲಿ ವಿಶ್ವಾಸ ಹೊಂದಿಲ್ಲ ಎಂದರು ಅವರು.
ಈ ಬಾರಿ ಚುನಾವಣೆಯಲ್ಲಿ ಬೆಲೆ ಏರಿಕೆಯದ್ದೇ ಪ್ರಮುಖ ವಿಷಯವಾಗಲಿದೆ. ಜನಸಾಮಾನ್ಯರು ಬದುಕುವ ಸ್ಥಿತಿ ಈಗ ಇಲ್ಲ. 2014ರಲ್ಲಿ ಇದ್ದ ಬೆಲೆಗಳು ಈಗ ಡಬಲ್ ಗಿಂತ ಹೆಚ್ಚಾಗಿವೆ. ಇದು ನೇರವಾಗಿ ಮಹಿಳೆಯರು ಮತ್ತು ಜನಸಾಮಾನ್ಯರಿಗೆ ಬಿಸಿ ಮುಟ್ಟಿಸಿದೆ. ಹಾಗಾಗಿ ಜನರು ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಜೊತೆಗೆ ರಾಷ್ಟ್ರದಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನೂ ಕಾಂಗ್ರೆಸ್ ಬೆಂಬಲಿಸಿದೆ. ರೈತರೊಂದಿಗೆ ನಾವಿದ್ದೇವೆ ಎಂದರು ಅವರು.
ಸ್ವಂತ ಮತ್ತು ಪಕ್ಷದ ನೆಟ್ ವರ್ಕ್
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ನೆಟ್ ವರ್ಕ್ ಚೆನ್ನಾಗಿದೆ. ಜೊತೆಗೆ ನಮ್ಮ ವಯಕ್ತಿಕ ನೆಟ್ ವರ್ಕ್ ಕೂಡ ಸಾಕಷ್ಟಿದೆ. ಅವುಗಳ ಮೂಲಕ ಮತದಾರರನ್ನು ತಲುಪುತ್ತೇವೆ. ಬಹುತೇಕ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ನಾವು ಬಹುಮತ ಸಾಧಿಸುತ್ತೇವೆ ಎಂದರು ಸತೀಶ್.
ಬಿಜೆಪಿ ಬೇರೆ ಯಾವುದಾದರೂ ಅಭ್ಯರ್ಥಿ ಹಾಕಿದ್ದರೆ ಸ್ವಲ್ಪವಾದರೂ ಫೈಟ್ ಆಗುತ್ತಿತ್ತು. ಈಗ ಸುರೇಶ ಅಂಗಡಿಯವರ ಪತ್ನಿಗೆ ಟಿಕೆಟ್ ಕೊಟ್ಟಿದ್ದಾರೆ. ಹಾಗಾಗಿ ನಮ್ಮ ಗೆಲುವು ಸುಲಭವಾಗಲಿದೆ. ಮತದಾನ ಒನ್ ಸೈಡ್ ಆಗಲಿದೆ ಎಂದು ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ