ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಒಡಂಬಡಿಕೆ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯು, ಕೇಂದ್ರ ಸರ್ಕಾರದ ಗೃಹ ಸಚಿವಾಲಯದ, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿ.ಆರ್.ಪಿಎಫ್)ಯಡಿಯಲ್ಲಿ ಎಪ್ರಿಲ್ 2004 ರಲ್ಲಿ ಬೆಳಗಾವಿಯ ತೋರ್ಲಿಯಲ್ಲಿ ಸ್ಥಾಪಿಸಲಾದ ಕೋಬ್ರಾ ಸ್ಕೂಲ್ ಫಾರ್ ಜಂಗಲ್ ವಾರ್‌ಫೆರ್ ಆಂಡ್ ಟ್ಯಾಕ್ಟಿಕ್ಸ್ ಸಂಸ್ಥೆಯೊಂದಿಗೆ ದಿನಾ0ಕ 02-08-2019 ರಂದು ಒಡಂಬಡಿಕೆ ಮಾಡಿಕೊಂಡಿದೆ.
ಸಿ.ಆರ್.ಪಿಎಫ್ ಅಧಿಕಾರಿಗಳಿಗೆ, ಅಧೀನ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಎಂಬಿಎ, ಪಿಜಿ ಡಿಫ್ಲೋಮಾ ಹಾಗೂ ವ್ಯವಹಾರ ನಿರ್ವಹಣೆ ಕ್ಷೇತ್ರದಲ್ಲ್ಲಿ ಸರ್ಟಿಫಿಕೆಟ್ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದು ಒಡಂಬಡಿಕೆಯ ಉದ್ದೇಶವಾಗಿದೆ.
ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ಅವಶ್ಯವಿರುವ ವ್ಯವಹಾರ ಜ್ಞಾನ, ಸೂಕ್ತ ನಿರ್ಧಾರ ಕೈಗೊಳ್ಳುವ ಕೌಶಲ್ಯ, ವಸ್ತುನಿಷ್ಠ ಆಲೋಚನೆ, ರಿಸ್ಕ ಮ್ಯಾನೆಜಮೆಂಟ್ ಮುಂತಾದ ವಿಷಯಗಳನ್ನು, ಸೂಕ್ತ ಅಧ್ಯಯನ ವರದಿಗಳನ್ನು ಒಳಗೊಂಡ ಪಠ್ಯಕ್ರಮವನ್ನು ಸಿಆರ್‌ಪಿಎಫ್ ಸಹಯೋಗದೊಂದಿಗೆ ವಿಶ್ವವಿದ್ಯಾಲಯದ ವತಿಯಿಂದ ತಯಾರಿಸಲಾಗುವುದು.
ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಕರಿಸಿದ್ದಪ್ಪ ಹಾಗೂ ಸಿಆರ್‌ಪಿಎಫ್ ಐಜಿಪಿ ಡಾ. ಟಿ. ಶೇಖರ ಪರಸ್ಪರ ಒಡಂಬಡಿಕೆ ಪ್ರತಿಯನ್ನು ವಿನಿಮಯ ಮಾಡಿಕೊಂಡರು.
ಕುಲಸಚಿವರಾದ ಡಾ. ಎ. ಎಸ್. ದೇಶಪಾಂಡೆ, ಮೌಲ್ಯಮಾಪನ ಕುಲಸಚಿವರಾದ ಡಾ. ಸತೀಶ ಅಣ್ಣಿಗೇರಿ, ಸಿಆರ್‌ಪಿಎಫ್ ಕಮಾಡೆಂಟ್ ಶ್ರೀ ಪ್ರೀತ್ ಮೋಹನ ಸಿಂಗ್, 2ನೇ ಕಮಾಡೆಂಟ್ ಶ್ರೀ ಅನಿಲ ಕಿಶೋರ್ ಯಾದವ, 2ನೇ ಕಮಾಡೆಂಟ್ ಗೌರವ ಕುಮಾರ, ಪ್ರಾಧ್ಯಾಪಕರಾದ ಡಾ. ಆರ್. ಆರ್. ಮಾಳಗಿ, ಡಾ. ಕೆ. ಶಿವಶಂಕರ ಈ ಸಂದರ್ಭದಲ್ಲಿ ಹಾಜರಿದ್ದರು////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ